Recent Posts

Monday, January 20, 2025
ಸುದ್ದಿ

ಅಕ್ರಮ ಮರಳು ಸಾಗಾಟ: ಮೂರು ಟಿಪ್ಪರ್ ಲಾರಿಗಳ ವಶ – ಕಹಳೆ ನ್ಯೂಸ್

ಮಂಗಳೂರು: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಮೂರು ಟಿಪ್ಪರ್ ಲಾರಿಗಳನ್ನು ತಿರುವೈಲು ಗ್ರಾಮದ ಪರಾರಿ ಜಂಕ್ಷನ್ ಬಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಟಿಪ್ಪರ್‌ನಲ್ಲಿ ತುಂಬಿದ್ದ ಮರಳಿನ ಒಟ್ಟು ಅಂದಾಜು ಮೌಲ್ಯ 25 ಲಕ್ಷದ 15 ಸಾವಿರ ಆಗಬಹುದು ಅಂತ ಅಂದಾಜಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಆದೇಶದಂತೆ ಮಂಗಳೂರು ಗ್ರಾಮಾಂತರ ಠಾಣೆಯ ಪಿಎಸ್‌ಐ ಮತ್ತು ಸಿಬ್ಬಂದಿ ಹಾಗೂ ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹದಳದ ತಂಡದೊಂದಿಗೆ ಎಎಸ್‌ಐ ಮೋಹನ್ ವಿಶೇಷ ಕರ್ತವ್ಯದಲ್ಲಿದ್ದಾಗ, ಉಳಾಯಿಬೆಟ್ಟು ರಸ್ತೆಯಿಂದಾಗಿ ಪರಾರಿ ಜಂಕ್ಷನ್ ಕಡೆಗೆ ಬರುತ್ತಿದ್ದ ಮೂರು ಟಿಪ್ಪರ್ ಲಾರಿಗಳನ್ನು ನಿಲ್ಲಿಸಿ, ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು