Friday, November 15, 2024
ಸುದ್ದಿ

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಇಬ್ಬರ ಬಂಧನ – ಕಹಳೆ ನ್ಯೂಸ್

ಮಂಗಳೂರು: ಕರ್ತವ್ಯದಲ್ಲಿದ್ದ ಪಣಂಬೂರು ಠಾಣಾ ಸಿಬ್ಬಂದಿಯವರು ರಾತ್ರಿ 2-30 ಗಂಟೆಗೆ ತೋಟಬೆಂಗ್ರೆಯ ಸರಕಾರಿ ಶಾಲೆಯ ಬಳಿ ತಲುಪುತ್ತಿದ್ದಂತೆ ಅಲ್ಲಿ ಇದ್ದ 4 ಜನ ಆರೋಪಿಗಳಾದ  ವಿಜೀತ್, ರಮೀತ್, ಶ್ರಾವಣ್. ಆಕಾಶ್ ಎಂಬವರು ಬೀಟು ಸಿಬ್ಬಂದಿಯವರಿಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆಯೊಡ್ಡಿ ಸಮವಸ್ತ್ರದಲ್ಲಿ ಸರಕಾರಿ ಕರ್ತವ್ಯದಲ್ಲಿರುವ ವೇಳೆ ಕರ್ತವ್ಯಕ್ಕೆ ಅಡ್ಡಿಪಡಿಸಿದವರಾಗಿರುತ್ತಾರೆ. ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ಪ್ರಕರಣದ ತನಿಖೆಯನ್ನು ಮುಂದುವರಿಸಿ ಇಬ್ಬರು ಆರೋಪಿಗಳಾದ ವಿಜೀತ್ ಅಲಿಯಾಸ್ ಶಿವರಾಜ್ ಕುಮಾರ್, ಶ್ರಾವಣ್ ಅಲಿಯಾಸ್ ಚಾನುರವರನ್ನು ಪಿ.ಎಸ್.ಐ ಉಮೇಶ್ ಕುಮಾರ್ ಎಮ್.ಎನ್ ಮತ್ತು ಮಂಗಳೂರು ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳದ ಸಿಬ್ಬಂದಿಯವರು ಈ ದಿನ ದಿನಾಂಕ 21-12-2018 ರಂದು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದಲ್ಲಿ ನ್ಯಾಯಾಂಗ ಬಂಧನಕ್ಕೆ ವಿಧಿಸಿರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದಸ್ತಗಿರಿಯಾದ ವಿಜೀತ್ ಅಲಿಯಾಸ್ ಶಿವರಾಜ್ ಕುಮಾರ್ ಈತನ ಮೇಲೆ ಪಣಂಬೂರು ಠಾಣೆಯಲ್ಲಿ ಈಗಾಗಲೇ ರೌಡಿ ಹಾಳೆಯನ್ನು ತೆರೆಯಲಾಗಿದ್ದು ಈತನ ಮೇಲೆ ಪಣಂಬೂರು ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿರುತ್ತದೆ. ಹಾಗೂ ಶ್ರಾವಣ್ ಅಲಿಯಾಸ್ ಚಾನು ಈತನ ಮೇಲೆ ಉಳ್ಳಾಲ ಠಾಣೆಯಲ್ಲಿ ರೌಡಿಹಾಳೆಯನ್ನು ತೆರೆಯಲಾಗಿದ್ದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಈಗಾಗಲೇ 5 ಪ್ರಕರಣ ದಾಖಲಾಗಿರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದಸ್ತಗಿರಿ ಮಾಡಿದ ಆರೋಪಿತರು
1. ಶ್ರಾವಣ್ ಅಲಿಯಾಸ್ ಚಾನು ಪ್ರಾಯ:24 ವರ್ಷ ತಂದೆ: ದಿ.ಸುಧೀರ್ ವಾಸ: ವ್ಯಾಘ್ರ ಚಾಮುಂಡಿ ದೇವಸ್ಥಾನದ ಹತ್ತಿರ,ಮೊಗವೀರ ಪಟ್ಟಣ,ಉಳ್ಳಾಲ, ಮಂಗಳೂರು ತಾಲೂಕು.
2. ವಿಜಿತ್ ಯಾನೆ ಶಿವರಾಜ್ ಕುಮಾರ್ ಪ್ರಾಯ 26 ವರ್ಷ ತಂದೆಃ-ಕೂಸಪ್ಪ ಸಾಲಿಯಾನ್ ವಾಸಃ-ಕೆ.ಎಸ್.ನಿವಾಸ ಸ್ಯಾಂಡ್ ಪೀಟ್ ಬೆಂಗ್ರೆ ತೋಟಬೆಂಗ್ರೆ, ಮಂಗಳೂರು ತಾಲೂಕು

ಪತ್ತೆ ಕಾರ್ಯ:
ಈ ಪ್ರಕರಣದ ಪತ್ತೆ ಕಾರ್ಯವು ಮಂಗಳೂರು ಉತ್ತರ ವಿಭಾಗದ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ. ಎಂ.ಮಂಜುನಾಥ ಶೆಟ್ಟಿ ಇವರ ಮಾರ್ಗದರ್ಶನದಂತೆ ಪಣಂಬೂರು ಠಾಣಾ ಪಿ.ಎಸ್.ಐ (ಕಾ.ಸು) ಶ್ರೀ ಉಮೇಶ್ ಕುಮಾರ್.ಎಂ.ಎನ್ ಹಾಗೂ ಮಂಗಳೂರು ಉತ್ತರ ಉಪವಿಭಾಗದ ರೌಡಿ ನಿಗ್ರಹ ದಳದ ಸಿಬ್ಬಂದಿಗಳು ಶ್ರಮಿಸಿರುತ್ತಾರೆ.