Recent Posts

Sunday, January 19, 2025
ಸಿನಿಮಾಸುದ್ದಿ

ಕೆಜಿಎಫ್ ಹವಾ ಮುಂದೆ “ಜೀರೋ” ಆದ ಬಾದ್ ಶಾ – ಕಹಳೆ ನ್ಯೂಸ್

ಸದ್ಯ ಭಾರತಾದ್ಯಂತ ಕೆ.ಜಿ.ಎಫ್ ಚಿತ್ರ ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಬಾಚ್ತಿದೆ. ರಾಕಿಂಗ್ ಸ್ಟಾರ್ ಯಶ್ ಅವರ ಕನಸಿನ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಕಂಡಿದೆ.

ಯಶ್ ಆ್ಯಕ್ಟಿಂಗ್‌ಗೆ ಫ್ಯಾನ್ಸ್ ಸಲಾಂ ಅಂತಿದ್ದಾರೆ. ಕೆ.ಜಿ.ಎಫ್ ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದು, ಎಲ್ಲೆಲ್ಲೂ ರಾಕಿ ಭಾಯ್, ರಾಕಿ ಭಾಯ್ ಅನ್ನೋ ಕೂಗು ಕೇಳಿ ಬರ‍್ತಾ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನೂ ಆಶ್ಚರ್ಯ ಅಂದ್ರೆ ಕೆ.ಜಿ.ಎಫ್ ಜೊತೆ ಬಾಲಿವುಡ್‌ನ ಜೀರೋ ಸಿನಿಮಾ ಕೂಡ ರಿಲೀಸ್ ಆಗಿತ್ತು. ಆದ್ರೆ ಕೆಜಿಎಫ್ ಸಿನೆಮಾದ ಅಬ್ಬರದ ಮುಂದೆ ಜೀರೋ ಸಿನಿಮಾದ ಮಾತು ಎಲ್ಲೂ ಕೇಳೂತ್ತಿರಲಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಜೀರೋ ಸಿನಿಮಾದಲ್ಲಿ ಬಾದ್‌ಶಾ ಶಾರುಖ್, ಸಲ್ಮಾನ್ ಖಾನ್, ಅನುಷ್ಕಾ ಶರ್ಮಾ, ಕತ್ರಿನಾ ಕೈಫ್‌ನಂತಹ ದೊಡ್ಡ ಸ್ಟಾರ್‌ಗಳಿದ್ರೂ ಆ ಸಿನಿಮಾದ ಸುದ್ದಿ ಎಲ್ಲೂ ಕೇಳಿ ಬರುವುದಿಲ್ಲ.

ಬಾಲಿವುಡ್‌ನಲ್ಲೇ ಬಿಗ್ ರೆಕಾರ್ಡ್ ಸೃಷ್ಟಿ ಮಾಡ್ತಾ ಇದ್ದ ಶಾರುಖ್ ಖಾನ್ ಸಿನಿಮಾ, ಕನ್ನಡದ ಕೆ.ಜಿ.ಎಫ್ ಮುಂದೆ ಕಾಣದಂತಾಗಿದೆ. ಈ ಬಗ್ಗೆ ಕನ್ನಡಿಗರೆಲ್ಲರೂ ಹೆಮ್ಮೆಪಟ್ಟಿದ್ದು, ರಾಖಿಭಾಯ್‌ಗೆ ಇಂಡಿಯಾ ತುಂಬಾ ಜೈ ಜೈ ಎನ್ನುತ್ತಿದ್ದಾರೆ.

ರಕ್ಷಿತಾ ಆಳ್ವ ಫಿಲ್ಮ್ ಬ್ಯೂರೋ ಕಹಳೆ ನ್ಯೂಸ್