Recent Posts

Monday, January 20, 2025
ಸುದ್ದಿ

ಬಸ್ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿ ಬಿದ್ದು 23 ಮಂದಿ ಸಾವು – ಕಹಳೆ ನ್ಯೂಸ್

ಕಠ್ಮಂಡು: ಕಾಲೇಜು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿದ್ದ ಶೈಕ್ಷಣಿಕ ಪ್ರವಾಸದ ಬಸ್ ಪರ್ವತಮಯ ರಸ್ತೆಯೊಂದರಲ್ಲಿ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿ ಬಿದ್ದು, 23 ಮಂದಿ ಮೃತಪಟ್ಟಿರುವ ಭೀಕರ ದುರಂತ ನೇಪಾಳದಲ್ಲಿ ಸಂಭವಿಸಿದೆ.

ಈ ದುರ್ಘಟನೆಯಲ್ಲಿ 14 ಮಂದಿ ತೀವ್ರ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶೈಕ್ಷಣಿಕ ಪ್ರವಾಸ ಮುಗಿಸಿ ಸಲ್ಯಾನ್ ಜಿಲ್ಲೆಯ ಕಪೂರ್‍ಕೋಟ್‍ನಿಂದ ಹಿಂದಿಗುತ್ತಿದ್ದ ಬಸ್ ಈ ಘೋರ ದುರಂತಕ್ಕೀಡಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ಧಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಸ್‍ನಲ್ಲಿ 34 ವಿದ್ಯಾಥಿಗಳು, ಇಬ್ಬರು ಶಿಕ್ಷಕರು ಮತ್ತು ಒಬ್ಬ ಚಾಲಕನಿದ್ದು, ರಾಜಧಾನಿ ಕಠ್ಮಂಡುವಿನಿಂದ 400 ಕಿ.ಮೀ. ದೂರದಲ್ಲಿ ರಾಮ್ರಿ ಗ್ರಾಮದ ಬಳಿ ಈ ದುರ್ಘಟನೆ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆಯಲ್ಲಿ ಮಗುಚಿ 700 ಮೀಟರ್ ಆಳದ ಪ್ರಪಾತಕ್ಕೆ ಉರುಳಿ ಬಿತ್ತು.

ಕೃಷ್ಣ ಸೇನ್ ಇಚ್ಚುಕ್ ಪಾಲಿಟೆಕ್ನಿಕ್ ಇನ್ಸ್‍ಟಿಟ್ಯುಟ್‍ನ ವಿದ್ಯಾರ್ಥಿಗಳು ಮತ್ತು ತರಬೇತುದಾರರು ಸಸ್ಯಶಾಸ್ತ್ರದ ಯೋಜನೆಗಾಗಿ ಗ್ರಾಮದ ತೋಟಕ್ಕೆ ಶೈಕ್ಷಣಿಕ ಭೇಟಿ ನೀಡಿದ್ದರು.

ಹಿಮಾಲಯ ರಾಷ್ಟ್ರ ನೇಪಾಳದ ರಸ್ತೆಗಳು ಕಳಪೆಯಾಗಿದ್ದು, ಚಾಲಕರ ಬೇಜವಾಬ್ದಾರಿ ವಾಹನ ಚಾಲನೆಯಿಂದ ಇಲ್ಲಿ ಅಪಘಾತಗಳು ಮತ್ತು ಸಾವು-ನೋವುಗಳು ಮರುಕಳಿಸುತ್ತಿವೆ.