Recent Posts

Sunday, January 19, 2025
ರಾಜಕೀಯಸುದ್ದಿ

ಬಿಎಸ್‌ವೈ ವಿರುದ್ಧ ಡಿಸಿಎಂ ತಿರುಗೇಟು – ಕಹಳೆ ನ್ಯೂಸ್

ಬೆಂಗಳೂರು: ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ಸಚಿವ ಸ್ಥಾನ ಹಂಚಿಕೆ ವೇಳೆ ಸ್ವಾಭಾವಿಕವಾಗಿ ಅಸಮಾಧಾನ ಇದ್ದೇ ಇರುತ್ತೆ ಎಂದು ಡಿಸಿಎಂ ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.

ಅವರು ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿ ಏರ್‌ಪೋರ್ಟ್ನಲ್ಲಿ ಮಾತನಾಡಿ, ಒಟ್ಟು 6 ಸಚಿವ ಸ್ಥಾನ ಖಾಲಿಯಿತ್ತು. ಅದರ ಜೊತೆಗೆ ಇಬ್ಬರ ಹೆಸರನ್ನು ಡ್ರಾಪ್ ಮಾಡಿ ಎಂಟು ಶಾಸಕರಿಗೆ ಸಚಿವ ಸ್ಥಾನ ನೀಡಲು ಸಮ್ಮತಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ರಾಮಲಿಂಗ ರೆಡ್ಡ ಹಾಗೂ ಬಿಸಿ ಪಾಟೀಲ್‌ಗೆ ಸಚಿವ ಸ್ಥಾನ ತಪ್ಪಿದ ಹಿನ್ನೆಲೆ ಅವರು ಅಸಮಾಧಾನ ವ್ಯಕ್ತಪಡಿಸೋದು ಸ್ವಾಭಾವಿಕ. ಅದೆಲ್ಲವನ್ನೂ ಮಾತುಕತೆ ನಡೆಸಿ ಸರಿ ಮಾಡ್ತೇವೆ ಅಂತ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಚಿವ ಸಂಪುಟ ವಿಸ್ತರಣೆಯಿಂದ ಕಾಂಗ್ರೆಸ್ ಪಾರ್ಟಿ ಮೇಲೆ ಪರಿಣಾಮ ಬೀರುತ್ತೆ ಎಂಬ ಬಿಎಸ್‌ವೈ ಹೇಳಿಕೆಗೆ, “ನಮ್ಮ ಪಕ್ಷದ ಮೇಲೆ ಅವರಿಗೆ ಅಷ್ಟು ಆಸಕ್ತಿ ಇದ್ರೆ ಅವರೇ ನಮ್ಮ ಪಕ್ಷಕ್ಕೆ ಬರಲಿ” ಎಂದು ಆಹ್ವಾನ ನೀಡಿ ತಿರುಗೇಟು ನೀಡಿದರು.