ಬಂಟ್ವಾಳ: ವಿವಾದಿತ ಪರಂಗಿಪೇಟೆ ಮೀನಿನ ಮಾರ್ಕೆಟ್ ಸ್ಥಳಕ್ಕೆ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಬೇಟಿ ನೀಡಿ ಪರಿಶೀಲನೆ ನಡೆಸಿದರು.ರೈಲ್ವೆ ಇಲಾಖೆಯವರ ಜಮೀನು ಅತಿಕ್ರಮಿಸಿ ಈ ಪ್ರದೇಶದಲ್ಲಿ ಮೀನಿನ ಮಾರ್ಕೆಟ್, ತರಕಾರಿ, ಹಣ್ಣು ಹಂಪಲು ಅಂಗಡಿಗಳನ್ನು ಮಾಡಿದ್ದಾರೆ ಎಂಬುದು ರೈಲ್ವೆ ಇಲಾಖೆಯ ಆರೋಪ. ಈ ಅಕ್ರಮ ಅಂಗಡಿಗಳನ್ನು ತೆರವುಗೊಳಿಸಬೇಕೆಂಬುವುದು ರೈಲ್ವೇ ಇಲಾಖೆಯ ಒತ್ತಾಯವಾಗಿದೆ. ಈ ಬಗ್ಗೆ 2016 ರಲ್ಲಿ ಅಂಗಡಿಗಳ ಮಾಲಕರಿಗೆ ನೋಟೀಸ್ ಜಾರಿ ಮಾಡಿದ್ದರು. ಅ ನಂತರ ನಿರಂತರವಾಗಿ ನೋಟೀಸ್ ನೀಡುತ್ತಾ ಬಂದಿರುವ ಇಲಾಖೆ ಕಳೆದ ವಾರ ಅಂತಿಮ ನೋಟೀಸ್ ಜಾರಿ ರೈಲ್ವೆ ಇಲಾಖೆಯ ಪೊಲೀಸ್ ಸಹಿತ ಡ್ರೋನ್ ಕ್ಯಾಮರಾ ಅಳವಡಿಸಿ ತೆರವು ಕಾರ್ಯಚರಣೆಗೆ ಮುಂದಾಗಿತ್ತು. ಆದರೆ ಸ್ಥಳೀಯ ಹಾಗೂ ಅಂಗಡಿ ಮಾಲೀಕರ ವಿರೋಧದ ಹಿನ್ನೆಲೆಯಲ್ಲಿ ಮಾತುಕತೆಯನ್ನು ನಡೆಸಿದ ಇಲಾಖೆ ಜ.15 ರವರೆಗೆ ಕಾಲಾವಕಾಶ ನೀಡಿತ್ತು. ಅದರೊಳಗೆ ಅಂಗಡಿಗಳನ್ನು ತೆರವುಗೊಳಿಸಲು ನೋಟೀಸ್ ಜಾರಿ ಮಾಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಮೀನು ಮಾರ್ಕೆಟ್ ಹಾಗೂ ಇತರ ಅಂಗಡಿ ಮಾಲಕರಿಗೆ ಅಲ್ಲೇ ಸಮೀಪದಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲು ಸ್ಥಳ ಗುರುತಿಸಿ ಬಳಿಕ ಗ್ರಾಮ ಪಂಚಾಯತ್ ಇವರಿಗೆ ಬದಲಿ ವ್ಯವಸ್ಥೆ ಶೀಘ್ರವಾಗಿ ಕಲ್ಪಿಸಿಕೊಡಲು ಸೂಚಿಸಿದರು. ಈ ಸಂದರ್ಭದಲ್ಲಿ ಗ್ರಾ.ಪಂ. ಅದ್ಯಕ್ಷ ರಮ್ಲಾನ್ ಪುದು, ಪ್ರಮುಖರಾದ ಫಾರೂಕ್ ಪರಂಗಿಪೇಟೆ, ಹಾಶೀರ್ ಪೇರಿಮಾರ್, ಮತ್ತಿತರರು ಉಪಸ್ಥಿತರಿದ್ದರು.
You Might Also Like
ವಿಟ್ಲಸ್ವರ ಸಿಂಚನ ಸಂಗೀತ ಶಾಲೆಗೆ ಶೇಕಡ 100 ಫಲಿತಾಂಶ-ಕಹಳೆ ನ್ಯೂಸ್
ಪೆರ್ನಾಜೆ: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಯುನಿವರ್ಸಿಟಿ ಮೈಸೂರು ನಡೆಸಿದ ಕರ್ನಾಟಕ ಶಾಸ್ತ್ರೀಯ ಸಂಗೀತ ಪರೀಕ್ಷೆಯಲ್ಲಿ ಜೂನಿಯರ್ ವಿಭಾಗದಲ್ಲಿ ಸ್ವರ ಸಿಂಚನ ಸಂಗೀತ ಶಾಲೆಯ ಆರು ಮಂದಿ...
ಗೋ ಸುಭದ್ರ ಪರಂಪರೆಯನ್ನು ವಿಶ್ವಕ್ಕೆ ಸಾರಿದ ತೃತೀಯ ವಿಶ್ವ ಹವ್ಯಕ ಸಮ್ಮೇಳನ-ಕಹಳೆ ನ್ಯೂಸ್
ಪೆರ್ನಾಜೆ:ಭಗವಾನ್ ಶ್ರೀ ಕೃಷ್ಣ ಹೇಳುತ್ತಾರೆ ಯಾವುದೇ ಒಬ್ಬ ಮನುಷ್ಯನ ಸಮಯ ಮತ್ತು ಪರಿಸ್ಥಿತಿ ನೋಡಿ ನಿಂದನೆಯನ್ನು ಮಾಡಬೇಡಿ ಯಾಕೆಂದರೆ ಅವರ ಸಮಯ ಯಾವಾಗ ಬೇಕಾದರೂ ಬದಲಾಗಬಹುದು. ನೀವು...
ಶ್ರೀ ಕುಂದೇಶ್ವರ ಸಮ್ಮಾನ್ ಪ್ರಶಸ್ತಿಗೆ ಯಕ್ಷಗಾನ ಕಲಾವಿದ ಹಾಸ್ಯ ಚಕ್ರವರ್ತಿ ಅರುಣ್ ಕುಮಾರ್ ಜಾರ್ಕಳ ಆಯ್ಕೆ -ಕಹಳೆ ನ್ಯೂಸ್
ಮಂಗಳೂರು: ಕಾರ್ಕಳ ಹಿರ್ಗಾನ ಕ್ಷೇತ್ರದಿಂದ ಪ್ರತಿ ವರ್ಷ ನೀಡಲಾಗುವ ಶ್ರೀ ಕುಂದೇಶ್ವರ ಸಮ್ಮಾನ್ ಪ್ರಶಸ್ತಿಗೆ ಯಕ್ಷಗಾನ ಕಲಾವಿದ ಹಾಸ್ಯ ಚಕ್ರವರ್ತಿ ಅರುಣ್ ಕುಮಾರ್ ಜಾರ್ಕಳ ಆಯ್ಕೆಯಾಗಿದ್ದಾರೆ. ಜ.23ರಂದು...
ರಾಜ್ಯದ ಜನತೆಗೆ ಗುಡ್ ನ್ಯೂಸ್ : `ಯಶಸ್ವಿನಿ ಯೋಜನೆ’ ನೋಂದಣಿಗೆ ಜ.31ರವರೆಗೆ ಅವಕಾಶ.!– ಕಹಳೆ ನ್ಯೂಸ್
ಬೆಂಗಳೂರು : ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಗೆ ಹೊಸದಾಗಿ ಹಾಗೂ ನವೀಕರಣಕ್ಕಾಗಿ ಸರ್ಕಾರ ಹಾಗೂ ಸಹಕಾರ ಇಲಾಖೆ ಪ್ರಕಟಣೆ ಹೊರಡಿಸಿದ್ದು ನೋಂದಣಿ ಮಾಡಿಸಲು ದಿನಾಂಕ:-31-01-2025 ಕೋನೆಯ ದಿನಾಂಕವಾಗಿರುತ್ತದೆ....