
ಸುಬ್ರಹ್ಮಣ್ಯ: ಕುಕ್ಕೇ ಶ್ರೀ ಸುಬ್ರಹ್ಮಣ್ಯದಲ್ಲಿ ಇಂದು ಭಕ್ತ ಸಾಗರ ಹರಿದು ಬಂದಿತ್ತು. ದೇವಾಲಯದಲ್ಲಿ ಸರ್ಪ ದೋಷ ಹಾಗು ಇನ್ನಿತರ ದೋಷ ಪರಿಹಾರಕ್ಕಾಗಿಸಾವಿರಾರು ಜನತೆ ದೇವಾಲಯಕ್ಕೆ ಆಗಮಿಸಿ ದೇವರಿಗೆ ಪೂಜೆ ಸಲ್ಲಿಸಿದರು.ಶಾಲಾ ಕಾಲೇಜು ಹಾಗು ಸರಕಾರಿ ಅಧಿಕಾರಿಗಳಿಗೆ ರಜೆ ಇದ್ದಿದ್ದರಿಂದ ಸಹಸ್ರಾರು ಭಕ್ತರು ಆಗಮಿಸಿದ್ದರು. ದೇವಾಲಯದ ಹೊರಾಂಗಣದಲ್ಲಿ ಸಾಲು ಸಾಲು ವಾಹನಗಳಿಂದ ತುಂಬಿತ್ತು. ಜೊತೆಗೆ ಬಹುತೇಕ ವಸತಿ ಗೃಹಗಳು ಖಾಲಿ ಇಲ್ಲದೆ ಭಕ್ತರು ಪರದಾಡುವಂತಾಗಿತ್ತು. ಭಕ್ತರು ಎಲ್ಲಿ ಕೇಳಿದರು ರೂಮ್ ಖಾಲಿ ಇಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಮುಂದಿನ ದಿನಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ದೇವರ ದರ್ಶನ ಪಡೆಯಲು ಬರುವ ಭಕ್ತರ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.