Friday, September 20, 2024
ಸುದ್ದಿ

ಸುಮಾತ್ರಾ ಮತ್ತು ಜಾವಾ ದ್ವೀಪಗಳ ನಡುವಿನ ಸುಂಡಾ ಜಲಸಂಧಿಯಲ್ಲಿ ಬೃಹತ್ ಸುನಾಮಿ – ಕಹಳೆ ನ್ಯೂಸ್

ಇದೇ ವರ್ಷ ಐದು ಬಾರಿ ಭೂಕಂಪಕ್ಕೆ ತುತ್ತಾಗಿರುವ ಇಂಡೋನೇಷ್ಯಾದಲ್ಲಿ ನಿಸರ್ಗ ಮತ್ತೊಮ್ಮೆ ರುದ್ರತಾಂಡ ಆಡಿದೆ. ಸುಮಾತ್ರಾ ಮತ್ತು ಜಾವಾ ದ್ವೀಪಗಳ ನಡುವಿನ ಸುಂಡಾ ಜಲಸಂಧಿಯಲ್ಲಿ ಶನಿವಾರ ರಾತ್ರಿ ಸ್ಥಳೀಯ ಕಾಲಮಾನ 9:27 ರ ಸುಮಾರಿಗೆ ಬೃಹತ್ ಸುನಾಮಿ ಉಂಟಾಗಿದೆ.

ಸುಂಡಾ ಜಲಸಂಧಿಯಲ್ಲಿ ಅನಕ್ ಕ್ರಟಾಟೌ ಎಂಬ ದ್ವೀಪವಿದೆ. ಇದಕ್ಕೆ ಜ್ವಾಲಾಮುಖಿಗಳ ದ್ವೀಪವೆಂದೆ ಹೆಸರು. ಇದರಲ್ಲಿನ ಕ್ರಟಾಟೌ ಜ್ವಾಲಾಮುಖಿ ಏಕಾಏಕಿ ಭುಗಿಲೆದ್ದಿದ್ದರಿಂದ ಅದರ ಪಕ್ಕದಲ್ಲಿದ್ದ ಸಾಗರದಲ್ಲಿ ಭೂಕಂಪವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಾಗರ ತಳದಲ್ಲಿ ಹಠಾತ್ತನೆ ಏರುಪೇರಾಗಿದ್ದರಿಂದ ಸಮುದ್ರದ ನೀರು ಮುಗಿಲೆತ್ತರಕ್ಕೆ ಚಿಮ್ಮಿ ಸುನಾಮಿ ಉಂಟಾಗಿದೆ ಎಂದು ಭೂಗರ್ಭಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಜಾಹೀರಾತು

ಈ ಸುನಾಮಿ ಸುಮಾರು 22 ಮಂದಿಯನ್ನು ಬಲಿತೆಗೆದುಕೊಂಡಿದೆ. ಅಂತೆಯೇ 800 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಅಂದಾಜಿನ ಪ್ರಕಾರ 50 ಜನರು ಕಾಣೆಯಾಗಿದ್ದಾರೆ. ಪರಿಹಾರ ಕಾರ್ಯಾಚರಣೆಗಳು ಸಮರೋಪಾದಿಯಲ್ಲಿ ಸಾಗುತ್ತಿವೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಆತಂಕವಿದೆ.