Saturday, September 21, 2024
ಸುದ್ದಿ

ಕಾಲು ಜಾರಿ ಬಿದ್ದು ಗಾಯಗೊಂಡ ಮಲ್ಲಿಕಾರ್ಜುನ ಖರ್ಗೆ – ಕಹಳೆ ನ್ಯೂಸ್

ಲೋಕಸಭೆ ವಿಪಕ್ಷ ನಾಯಕ, ಸಂಸದ ಮಲ್ಲಿಕಾರ್ಜುನ ಖರ್ಗೆ ಸ್ನಾನ ಮಾಡಲು ಬಾತ್ ರೂಮಿಗೆ ತೆರಳಿದ ವೇಳೆ ಕಾಲು ಜಾರಿ ಬಿದ್ದು ಗಾಯಗೊಂಡಿದ್ದಾರೆ.

ಕಲಬುರ್ಗಿಯ ಸ್ವಗ್ರಹ ‘ಲುಂಬಿನಿ’ಯಲ್ಲಿ ಖರ್ಗೆ ಕಾಲು ಜಾರಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಜಾರಿ ಬೀಳುತ್ತಿದ್ದಂತೆ ಕೂಗಿಕೊಂಡಿದ್ದು, ಸಹಾಯಕ್ಕೆ ಓಡಿ ಬಂದ ಗನ್‌ಮ್ಯಾನ್ ಮತ್ತು ಆಪ್ತ ಸಹಾಯಕರು ಎಬ್ಬಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಘಟನೆಯಲ್ಲಿ ಖರ್ಗೆ ಅವರ ಸೊಂಟಕ್ಕೆ ಮತ್ತು ಬಲಗಾಲಿನ ಹೆಬ್ಬೆರಳಿಗೆ ಗಾಯಗಳಾಗಿವೆ. ವೈದ್ಯರನ್ನು ಮನೆಗೆ ಕರೆಸಿ ಪ್ರಾಥಮಿಕ ಚಿಕಿತ್ಸೆ ಕೊಡಲಾಗಿದ್ದು, ಅಷ್ಟೇನು ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.

ಜಾಹೀರಾತು