Recent Posts

Sunday, January 19, 2025
ಸಿನಿಮಾಸುದ್ದಿ

ರಾಕಿಂಗ್ ಕೆಜಿಎಫ್: ನಾಲ್ಕು ದಿನಗಳಲ್ಲಿ ಕೆಜಿಎಫ್ 80 ಕೋಟಿ ಕಲೆಕ್ಷನ್ – ಕಹಳೆ ನ್ಯೂಸ್

ಬೆಂಗಳೂರು: ಐದು ಭಾಷೆಯಲ್ಲಿ ತೆರೆಗೆ ಬಂದ ಕೆಜಿಎಫ್ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ನಾಲ್ಕು ದಿನಗಳಲ್ಲಿ ಕೆಜಿಎಫ್ 80 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ಕೆಜಿಎಫ್ ಚಿತ್ರ ಕನ್ನಡದಲ್ಲೊಂದೇ ಅಲ್ಲ ತಮಿಳು, ತೆಲುಗು ಸೇರಿದಂತೆ ಹಿಂದಿ ಭಾಷೆಯಲ್ಲೂ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಪ್ರಕಾರ, ಭಾನುವಾರಕ್ಕಿಂತ ಸೋಮವಾರ ಹಿಂದಿ ಅವತರಣಿಕೆ ಕಲೆಕ್ಷನ್ ಹೆಚ್ಚಾಗಿದೆ. ಮಂಗಳವಾರ ಕ್ರಿಸ್ಮಸ್ ರಜೆಯಿರುವ ಕಾರಣ ಚಿತ್ರದ ಗಳಿಕೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತರಣ್ ಆದರ್ಶ್ ಪ್ರಕಾರ, ಶುಕ್ರವಾರ ಹಿಂದಿ ಕೆಜಿಎಫ್ ಗಳಿಕೆ 2.10 ಕೋಟಿಯಾಗಿತ್ತು. ಶನಿವಾರ 3 ಕೋಟಿ ಗಳಿಕೆ ಮಾಡಿತ್ತು. ಭಾನುವಾರ 4.10 ಕೋಟಿ ಗಳಿಕೆಯಾಗಿತ್ತು. ಸೋಮವಾರ 9.90 ಕೋಟಿ ಗಳಿಕೆಯಾಗಿದೆ. ಭಾರತದಲ್ಲಿ ಹಿಂದಿ ಕೆಜಿಎಫ್ ಗಳಿಕೆ ಒಟ್ಟು 12.10 ಕೋಟಿ ರೂಪಾಯಿ.

ಜಾಹೀರಾತು
ಜಾಹೀರಾತು
ಜಾಹೀರಾತು

ನಾಲ್ಕನೇ ದಿನ ದಕ್ಷಿಣ ಭಾರತದಲ್ಲಿ ಚಿತ್ರ 41.7ಕೋಟಿ ಗಳಿಕೆ ಮಾಡಿದೆ ಎನ್ನಲಾಗ್ತಿದೆ. ಆಂಧ್ರಪ್ರದೇಶ, ತಮಿಳುನಾಡು ಹಾಗೂ ತೆಲಂಗಾಣದಲ್ಲಿ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಗ್ತಿದೆ. ಅಮೆರಿಕಾದಲ್ಲೂ ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರ ನಾಲ್ಕು ದಿನಗಳಲ್ಲಿ ಅಲ್ಲಿ 5 ಕೋಟಿ ಗಳಿಸಿದೆ.