Friday, November 15, 2024
ಸುದ್ದಿ

ಶೀಘ್ರದಲ್ಲೇ ಹೊಸ ರೂಪದ 20 ರೂ. ನೋಟು ಬಿಡುಗಡೆ ಮಾಡಲಿರುವ ಆರ್‌ಬಿಐ – ಕಹಳೆ ನ್ಯೂಸ್

ಶೀಘ್ರದಲ್ಲೇ ಹೊಸ ರೂಪದ 20 ರೂಪಾಯಿ ನೋಟನ್ನು ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಲಿದ್ದು, ಅದರಲ್ಲಿ ಕೆಲವು ವೈಶಿಷ್ಟ್ಯತೆಗಳು ಇರಲಿವೆ ಎಂದು ಬ್ಯಾಂಕ್ ಮೂಲ ತಿಳಿಸಿದೆ.

ಕಳೆದ ವರ್ಷ 500 ರೂ, 1,000 ರೂಪಾಯಿ ನೋಟುಗಳ ಅಪಮೌಲ್ಯೀಕರಣವಾದ ಬಳಿಕ ಆರ್‌ಬಿಐ ಹೊಸ ಮಾದರಿಯಲ್ಲಿ 10 ರೂ, 50, 500 ರೂಪಾಯಿಗಳ ನೋಟನ್ನು ಮುದ್ರಿಸಿದೆ. ಹಾಗೇ 200 ರೂ. ಮತ್ತು 2,000 ರೂಪಾಯಿಗಳ ನೋಟುಗಳೂ ಚಾಲ್ತಿಯಲ್ಲಿ ಬಂದಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

2016 ರ ನವೆಂಬರ್‌ನಿಂದ ಈ ಹೊಸರೂಪದ ನೋಟುಗಳು ಚಾಲ್ತಿಯಲ್ಲಿ ಬಂದಿವೆ. ಹಳೇ ನೋಟುಗಳಿಗೆ ಹೋಲಿಸಿದರೆ ಇವುಗಳ ವಿನ್ಯಾಸ, ಅಳತೆಯಲ್ಲಿ ತುಂಬ ವ್ಯತ್ಯಾಸವಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈಗ 20 ರೂಪಾಯಿ ನೋಟು ಕೂಡ ಶೀಘ್ರದಲ್ಲೇ ಹೊಸದಾಗಿ ಚಾಲ್ತಿಯಲ್ಲಿ ಬರಲಿದೆ. 2016 ರ ಮಾರ್ಚ್ 31 ರಲ್ಲಿ ಸುಮಾರು 4.92 ಬಿಲಿಯನ್‌ಗಳಷ್ಟು 20 ರೂಪಾಯಿ ನೋಟುಗಳ ಪ್ರಸರಣವಿತ್ತು.

2016 ರ ಮಾರ್ಚ್ನಲ್ಲಿ ಪ್ರಸರಣ ದ್ವಿಗುಣಕ್ಕೂ ಹೆಚ್ಚಾಗಿದ್ದು, 20 ಬಿಲಿಯನ್ ನೋಟುಗಳು ಸರ್ಕ್ಯೂಲೆಟ್ ಆಗುತ್ತಿವೆ ಎಂದು ಬ್ಯಾಂಕ್ ದಾಖಲೆ ತಿಳಿಸಿದೆ. ಒಟ್ಟಾರೆ ನೋಟುಗಳ ಪ್ರಸರಣದಲ್ಲಿ ಶೇ.೯.೮ರಷ್ಟು 20 ರೂಪಾಯಿ ನೋಟುಗಳ ಪ್ರಸರಣವಿದೆ ಎನ್ನಲಾಗಿದೆ.