Recent Posts

Monday, January 20, 2025
ಸುದ್ದಿ

ಚಿತ್ರಸಂತೆಗೆ ಕ್ಷಣಗಣನೆ ಆರಂಭ: ಜ. 6 ರಂದು ಚಿತ್ರ ಸಂತೆ – ಕಹಳೆ ನ್ಯೂಸ್

ಬೆಂಗಳೂರು: ಚಿತ್ರಸಂತೆಗೆ ಕ್ಷಣಗಣನೆ ಆರಂಭವಾಗಿದ್ದು, ಜನವರಿ 6 ರಂದು ಚಿತ್ರ ಸಂತೆ ನಡೆಯಲಿದ್ದು, ಕರ್ನಾಟಕದಿಂದ ಹೆಚ್ಚಿನ ಕಲಾವಿದರು ಆಗಮಿಸುತ್ತಿದ್ದಾರೆ. ಜೊತೆಗೆ ಕೇರಳ, ಮಹಾರಾಷ್ಟ್ರ,ಆಂಧ್ರ, ಒಡಿಶಾ, ರಾಜಸ್ಥಾನ ಮತ್ತಿತರೆ ರಾಜ್ಯಗಳ ಕಲಾವಿದರು ಭಾಗವಹಿಸಲಿದ್ದಾರೆ.

ಇದು 16 ನೇ ಚಿತ್ರ ಸಂತೆಯಾಗಿದ್ದು, ಇಲ್ಲಿ ಗಾಂಧಿ ಪ್ರಮುಖ ಆಕರ್ಷಣೆಯಾಗಲಿದ್ದಾರೆ. ಈ ಚಿತ್ರಸಂತೆಯಲ್ಲಿ ವಿಕಲಚೇತನರಿಗಾಗಿ 100 ಮಳಿಗೆಗಳನ್ನು ಮೀಸಲಿಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಾರಿ ಒಟ್ಟು 1,400 ಮಳಿಗೆಗಳಿಗೆ ಅವಕಾಶ ನೀಡಲಾಗಿದೆ. ಚಿತ್ರಸಂತೆಯಲ್ಲಿ ನಿರ್ಮಿಸುವ ಮಳಿಗೆಗಳಿಗೆ ಬೇಕಾದ ಚೇರ್, ಟೇಬಲ್ ಮತ್ತಿತರೆ ಪರಿಕರಗಳು ಹಾಗೂ ಚಿತ್ರಕಲಾವಿದರು, ಸ್ವಯಂ ಸೇವಕರು, ಭದ್ರತಾ ಸಿಬ್ಬಂದಿ ಸೇರಿದಂತೆ ಚಿತ್ರಸಂತೆಯಲ್ಲಿ ಭಾಗವಹಿಸುವವರಿಗೆ ಊಟ, ಕುಡಿಯುವ ನೀರು, ತಿಂಡಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗಾಂಧಿ 150 ಶೀರ್ಷಿಕೆಯಡಿ ಗಾಂಧೀಜಿಯವರ ಕುರಿತ ಶಿಲ್ಪಕಲೆ, ಬೊಂಬೆಗಳು ಮತ್ತಿತರೆ ಪ್ರದರ್ಶನ ಗ್ಯಾಲರಿಯನ್ನು ನಿರ್ಮಿಸಲಾಗುತ್ತಿದೆ.