Recent Posts

Monday, January 20, 2025
ಸುದ್ದಿ

ನಮ್ಮ ರಕ್ತಕ್ಕೆ ಗೌರವ ಸಿಗಬೇಕಾದರೆ ಮೋದಿಯನ್ನು ಮತ್ತೆ ಪ್ರಧಾನಿ ಮಾಡಿ: ಗುಡುಗಿದ ಅನಂತ್ – ಕಹಳೆ ನ್ಯೂಸ್

ಸದಾ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗುತ್ತಿದ್ದ ಕೇಂದ್ರ ಸಚಿವ, ನಾಯಕ ಅನಂತ್ ಕುಮಾರ್ ಹೆಗಡೆ ಇದೀಗ ಮತ್ತೆ ಗುಡುಗಿದ್ದಾರೆ. ಶತಮಾನಗಳ ಕಾಲ ನಮ್ಮ ರಕ್ತಕ್ಕೆ ಗೌರವ ಸಿಗಬೇಕಾದರೆ ಮತ್ತೊಮ್ಮೆ ಪ್ರಧಾನಿ ಮೋದಿ ಅವರನ್ನು ಗೆಲ್ಲಿಸಬೇಕೆಂದು ಅನಂತ್ ಕುಮಾರ್ ಹೆಗಡೆ ಹೇಳಿಕೆ ನೀಡಿದ್ದಾರೆ.

ಬಾಗಲಕೋಟೆಯಲ್ಲಿ ನಗರದ ಬಸವೇಶ್ವರ ಮಿನಿ ಆಡಿಟೋರಿಯಂ ಹಾಲ್‌ನಲ್ಲಿ ನಡೆದ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ದೇಶದ ಸಂಸ್ಕೃತಿ ಬೇರುಗಳು ಗಟ್ಟಿಯಾಗಬೇಕು, ಈ ದೇಶದ ಮಣ್ಣಿಗೆ ಗೌರವ ಕೊಡುವ ಸರ್ಕಾರ ಬರಬೇಕು.

ಶತಮಾನಗಳ ಕಾಲ ನಮ್ಮ ರಕ್ತಕ್ಕೆ ಗೌರವ ಸಿಗಬೇಕಾದರೆ ಮತ್ತೊಮ್ಮೆ ಪ್ರಧಾನಿ ಮೋದಿ ಅವರನ್ನು ಗೆಲ್ಲಿಸಬೇಕು, ಮೋದಿ ಮತ್ತೊಮ್ಮೆ ಪ್ರದಾನಮಂತ್ರಿ ಆಗಬೇಕು. ಅದು ನಮಗಿಂತಲೂ ಜಗತ್ತಿಗೆ ಬೇಕಾಗಿದೆ ಎಂದು ಹೆಗಡೆ ಹೇಳಿದರು.