Monday, January 20, 2025
ಸುದ್ದಿ

ಹಣ ಕೊಡ್ರಿ, ಇಲ್ಲ ಸಾಲ ಕೊಡಿಸಿ ಎಂದು ಪದೇಪದೇ ಸಿಎಂ ಬೆನ್ನು ಬಿದ್ದಿರುವ ಆಸಾಮಿ – ಕಹಳೆ ನ್ಯೂಸ್

ವಿಜಯಪುರ: ಸಾಲ ಕೊಡಿಸುವಂತೆ ಪದೇಪದೇ ಬೆನ್ನು ಬಿದ್ದಿದ್ದ ವ್ಯಕ್ತಿಯೊಬ್ಬನನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡ ಘಟನೆ ವಿಜಯಪುರದಲ್ಲಿ ನಡೆದಿದೆ.

ವಿಜಯಪುರದಲ್ಲಿ ಮುಖ್ಯಮಂತ್ರಿಯವರು ಸಾರ್ವಜನಿಕರ ಅಹವಾಲು ಸ್ವೀಕರಿಸುತ್ತಿದ್ದ ಈ ಘಟನೆ ನಡೆದಿದೆ. ವಿಜಯಪುರ ಜಿ.ಹಾವಿನಾಳ ಗ್ರಾಮದ ನಿವಾಸಿ ಕಾಶೀನಾಥ್ ಬನಸೋಡೆ ಸಿಎಂಗೆ ಬೆನ್ನಿಗೆ ಬಿದ್ದಿರುವ ವ್ಯಕ್ತಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಈತ ಇದುವರೆಗೆ ಸುಮಾರು 50 ಬಾರಿ ಕುಮಾರಸ್ವಾಮಿಯವರನ್ನು ಭೇಟಿಯಾಗಿ ಹಣ ಪಡೆದಿದ್ದ ಎಂದು ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ಸಿಎಂರನ್ನು ಭೇಟಿಯಾದ ಕಾಶೀನಾಥ್, ”ಹಣ ಕೊಡಿ, ಇಲ್ಲಾ ಬ್ಯಾಂಕಿನಿಂದ ಸಾಲ ಕೊಡಿಸಿ” ಎಂದು ಮನವಿ ಮಾಡಿದ. ಈ ವೇಳೆ ”ಈತ ಕಳ್ಳ ಆಸಾಮಿ, ಇದಕ್ಕೂ ಮೊದಲು ೫೦ ಬಾರಿ ನನ್ನ ಬಳಿ ಬಂದಿದ್ದಾನೆ.

ಪ್ರತೀ ಸಾರಿ ಹಣ ಕೊಟ್ಟು ಕಳಿಸಿದ್ದೇನೆ. ಮತ್ತೆ ಈಗ ಬಂದಿದ್ದಾನೆ” ಎಂದ ಸಿಎಂ ಕುಮಾರಸ್ವಾಮಿ ಆತನನ್ನು ತರಾಟೆಗೆ ತಗೆದುಕೊಂಡರು.