Monday, November 25, 2024
ಸುದ್ದಿ

ಯುಟ್ಯೂಬ್ ನಲ್ಲಿ ಸಂಚಲನ ಮೂಡಿಸುತ್ತಿದೆ ಜೈ ಗೋಮಾತ | ಶಾಂತ ಕುಂಟಿನಿ ಸಾಹಿತ್ಯ, ಜಗದೀಶ್ ಪುತ್ತೂರು ಕಂಠಸಿರಿ.

ಪುತ್ತೂರು : ಪ್ರತಿಷ್ಠಿತ ಸತ್ಯ ಶಾಂತ ಪ್ರೋಡಕ್ಷನ್ಸ್ ನವರು ದೀಪಾವಳಿಗೆ ಉಡುಗೊರೆಯಾಗಿ ಗೋವಿನ ಮಹತ್ವವನ್ನು ಸಾರುವ ಜೈ ಗೋಮಾತ ಶೀರ್ಶಿಕೆಯ ಗೋವಿನ ಹಾಡನ್ನು ಯುಟ್ಯೂಬ್ ಮೂಲಕ ರಿಲೀಸ್ ಮಾಡಿ ಜನಮನ್ನಣೆಗೆ ಪಾತ್ರರಾಗಿದ್ದಾರೆ.

ಖ್ಯಾತ ಸಾಹಿತಿ ಶಾಂತ ಕುಂಟಿನಿಯವರು ರಚಿಸಿರುವ ಅರ್ಥಪೂರ್ಣ ಸಾಹಿತ್ಯಕ್ಕೆ ಜಗದೀಶ್ ಪುತ್ತೂರು ಸಂಗೀತ ಸಂಯೋಜನೆ ಮಾಡಿ ಹಾಡಿದ್ದಾರೆ. ಶ್ಯಾಮ ಸುದರ್ಶನ ಹೊಸಮೂಲೆ ನಿರ್ದೇಶನದಲ್ಲಿ ಮೂಡಿಬಂದ ಈ ಗೀತೆಗೆ ನಟೇಶ್ ಭಟ್ ಕ್ಯಾಮರಾ ವರ್ಕ್ ಮಾಡಿದ್ದಾರೆ. ಚಿಕ್ಕಮಂಗಳೂರು, ಧರ್ಮಸ್ಥಳ, ಸೌತಡ್ಕ ಸೇರಿದಂತೆ ವಿವಿಸ ಸ್ಥಳಗಳಲ್ಲಿ ಗೋವಿನ ಹಾಡಿನ ಚಿತ್ರಿಕರಣ ನಡೆದಿದ್ದು ಇದೀಗ ಗೋ ಪ್ರೇಮಿಗಳ ಬಾಯಲಿ ಈ ಗೀತೆ ಗುಣುಗುಡುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಜನತೆಗೆ ನಾನು ಕೊಡುವ ದೀಪಾವಳಿ ಹಬ್ಬದ ಉಡುಗೊರೆಯೇ ಈ ಗೋವಿನ ಹಾಡು. ಈ ಉಡುಗೊರೆಯನ್ನು ಎಲ್ಲಾ ಗೋಪ್ರೇಮಿಗಳು ಸ್ವೀಕರಿಸಿ, ನಮ್ಮನ್ನು ಹರಸಿ,ಪ್ರೋತ್ಸಾಹಿಸಿ.                        ‌        -ಕವಯತ್ರಿ ಶಾಂತ ಕುಂಟಿನಿ.

Leave a Response