Sunday, November 24, 2024
ಸುದ್ದಿ

ಬಸವರಾಜ ಹೊರಟ್ಟಿಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ – ಕಹಳೆ ನ್ಯೂಸ್

ಕಾಂಗ್ರೆಸ್ ದೋಸ್ತಿ ಸರ್ಕಾರದ ಸಂಪುಟ ಪುನಾರಚನೆ ನಡೆದಿದ್ದು, ಕಾಂಗ್ರೆಸ್ ತನ್ನ ಬಳಿ ಇದ್ದ ಬಾಕಿಯಿದ್ದ ಆರು ಸಚಿವ ಸ್ಥಾನವನ್ನು ಭರ್ತಿ ಮಾಡಿಕೊಂಡಿದೆ.

ಜೆಡಿಎಸ್ 2 ಸಚಿವ ಸ್ಥಾನ ಹಾಗೂ ಬಿಎಸ್ ಪಿಯ ಎನ್. ಮಹೇಶ್ ರಿಂದ ತೆರವಾಗಿರುವ ಒಂದು ಸಚಿವ ಸ್ಥಾನವನ್ನು ಭರ್ತಿ ಮಾಡದೇ ಹಾಗೆಯೇ ಉಳಿಸಿಕೊಂಡಿದ್ದು, ಇದೀಗ ಮಹೇಶ್ ರಿಂದ ತೆರವಾಗಿರುವ ಸಚಿವ ಸ್ಥಾನವನ್ನು ಜೆಡಿಎಸ್ ನ ಹಿರಿಯ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿಗೆ ನೀಡಲು ಪಕ್ಷ ಚಿಂತನೆ ನಡೆಸಿದೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಉತ್ತರ ಕರ್ನಾಟಕದ ಹಿರಿಯ ರಾಜಕಾರಣಿ, ವೀರಶೈವ ಲಿಂಗಾಯ ಸಮುದಾಯದ ನಾಯಕ ಹಾಗೂ ವಿಧಾನಪರಿಷತ್ ಸದಸ್ಯರಾಗಿರುವ ಬಸವರಾಜ್ ಹೊರಟ್ಟಿ ಅವರೇ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಗೆ ಸೂಕ್ತ ವ್ಯಕ್ತಿ ಎಂದು ಹೇಳಲಾಗುತ್ತಿದ್ದು, ಮಾಜಿ ಪ್ರಧಾಣಿ ಹೆಚ್.ಡಿ.ದೇವೆಗೌಡರು ಹಾಗೂ ಸಿಎಂ ಕುಮಾರಸ್ವಾಮಿ ಅವರು ಹೊರಟ್ಟಿಗೆ ಶಿಕ್ಷಣ ಖಾತೆಯ ಜವಾಬ್ದಾರಿಯನ್ನು ನೀಡುತ್ತಾರೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು