ದ್ವೀಪ ರಾಷ್ಟ್ರ ಇಂಡೋನೇಷ್ಯಾದ ಸುಂಡಾ ಜಲಸಂಧಿ ಜ್ವಾಲಾಮುಖಿ ಸ್ಫೋಟದಿಂದ ಅಪ್ಪಳಿಸಿದ ರಕ್ಕಸ ಸುನಾಮಿಗೆ ಇಲ್ಲಿಯವರೆಗೆ 429 ಮಂದಿ ಬಲಿಯಾಗಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಈ ಅವಘದಲ್ಲಿ 130 ಜನರು ನಾಪತ್ತೆ ಆಗಿದ್ದಾರೆ. ಹೀಗಾಗಿ, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಭೀತಿ ಆವರಿಸಿದೆ. ಘಟನೆಯಲ್ಲಿ ಸುಮಾರು 1,500 ಕ್ಕೂ ಅಧಿಕ ಜನರು ಗಾಯಗೊಂಡಿದ್ದು, 16 ಸಾವಿರ ಜನರು ನಿರಾಶ್ರಿತರಾಗಿದ್ದಾರೆ.
ಗಾಯಗೊಂಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೆಲವರು ಬಿಡುಗಡೆ ಆಗಿದ್ದಾರೆ. ಸುನಾಮಿ ಹೊಡೆತಕ್ಕೆ ಮನೆ, ಕಟ್ಟಡ, ಹೋಟೆಲ್, ಹಡಗುಗಳು ಧ್ವಂಸವಾಗಿದೆ. ನಿರಾಶ್ರಿತರಿಗೆ ವಾಸ್ತವ್ಯ ಒದಗಿಸಲು ಸರ್ಕಾರ ಹರಸಾಹಸ ಪಡುತ್ತಿದೆ.