ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಕಚ್ಚಾ ತೈಲ ಪೂರೈಕೆ ಹೆಚ್ಚಾಗುತ್ತಿರುವುದರಿಂದ ಕಚ್ಚಾ ತೈಲ ದರ ನಿರಂತರವಾಗಿ ಇಳಿಕೆ ಆಗುತ್ತಿದೆ. ಹೀಗಾಗಿ, ದೇಶಾದ್ಯಂತ ಇಂಧನ ಚಿಲ್ಲರೆ ಮಾರುಕಟ್ಟೆಯಲ್ಲಿ ಲೀಟರ್ ಪೆಟ್ರೋಲ್ ದರ ಒಂದು ವರ್ಷದ ಮಟ್ಟಿಗೆ ಕನಿಷ್ಠ ದರಕ್ಕೆ ಕುಸಿದಿದೆ.
2017 ರ ಡಿಸೆಂಬರ್ 25 ರಂದು ಬೆಂಗಳೂರಿನಲ್ಲಿ ಲೀ. ಪೆಟ್ರೋಲ್ ದರ 70.73 ರಲ್ಲಿ ಇತ್ತು. 2018 ರ ಡಿಸೆಂಬರ್ 25 ರಂದು 70.35 ಕ್ಕೆ ಲಭ್ಯ ಆಗುತ್ತಿದ್ದು, 38 ಪೈಸೆಯಷ್ಟು ಇಳಿಕೆ ಆಗಿದೆ.
ಅಕ್ಟೋಬರ್ 1 ರಂದು ಲೀಟರ್ ಪೆಟ್ರೋಲ್ ದರ 84.40 ಇತ್ತು. ಇದಕ್ಕೆ ಹೋಲಿಸಿದರೆ ಒಂದು ಲೀಟರ್ ಪೆಟ್ರೋಲ್ ದರ 14.05 ರಷ್ಟು ಇಳಿಕೆ ಆಗಿದೆ.