ಮಂಗಳೂರು: ದಕ್ಷಿಣ ಪೊಲೀಸ್ ಠಾಣೆಯಲ್ಲಿ 2015 ನೇ ಸಾಲಿನಲ್ಲಿ ವರದಿಯಾದ ದರೋಡೆ ಯತ್ನ ಪ್ರಕರಣದಲ್ಲಿ ದಸ್ತಗಿರಿಯಾದ ಆರೋಪಿಗಳ ಪೈಕಿ ಇಬ್ಬರು ಆರೋಪಿಗಳ ಬಂಧಿಸಲಾಗಿದೆ.
ಆರೋಪಿಗಳಾದ ಧನರಾಜ್ ಹಾಗೂ ಧೀರಜ್ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು ಈ ಬಗ್ಗೆ ಮಾನ್ಯ ನ್ಯಾಯಾಲಯ ಆರೋಪಿಗಳ ಮೇಲೆ ಜಾಮೀನು ರಹಿತ ವಾರೆಂಟ್ ಹೊರಡಿದೆ.
ಸದ್ರಿ ಆರೋಪಿಗಳನ್ನು ಈ ದಿನಾಂಕ 26-12-2018 ರಂದು ಬೆಳಿಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕರಾದ ಕೆ.ಎಂ.ಶರೀಫ್ ರವರ ನಿರ್ದೇಶನದಂತೆ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ಚಂದ್ರಶೇಖರ ಮತ್ತು ವಾರೆಂಟ್ ಸಿಬ್ಬಂದಿಗಳಾದ, ಸೂರಜ್, ಭಾಸ್ಕರ ಹಾಗೂ ಠಾಣಾ ಸಿಬ್ಬಂದಿ ಸಿದ್ಧಣ ಗೌಡರವರು ಮಂಗಳೂರು ನಗರದ ಕಂಕನಾಡಿ ರೈಲ್ಪೆ ನಿಲ್ದಾಣದ ಬಳಿ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಮಾನ್ಯ ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.