ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ ಹಾಗೂ ಬ್ಯಾಂಕ್ ಆಫ್ ದೆನಾ ಬ್ಯಾಂಕುಗಳನ್ನು ವಿಲಿನಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಇಂದು ರಾಷ್ಟ್ರೀಕೃತ ಬ್ಯಾಂಕ್‌ಗಳ ಸಿಬ್ಬಂಧಿಗಳು ತಮ್ಮ ಕೆಲಸಕ್ಕೆ ಗೈರಾಗಿ ಪ್ರತಿಭಟನೆಯನ್ನು ಬೆಳಗಾವಿ ನಗರದಲ್ಲಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರೊಬ್ಬರು ನೇಷನ್ ಕಾನ್ಫಡರೇಶನ್ ಆಫ್ ಬ್ಯಾಂಕ್ ಎಂಪ್ಲೈಸ್ ಎಂಬ ಸಂಘಟನೆಯ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಈ ನೀತಿಯನ್ನು ಕೈಗೆತ್ತಿಕೊಂಡಿದೆ ಎಂದು ಆರೋಪಿಸಿರುವ ಬ್ಯಾಂಕ್ ಸಿಬ್ಬಂಧಿಗಳು, ಈ ನೀತಿಯಿಂದ ಗ್ರಾಹಕರಿಗು ಹಾಗೂ ನೌಕರರಿಗೂ ತೊಂದರೆಯಾಗುತ್ತದೆ. ಆದ್ದರಿಂದ ಈ ನಿರ್ಧಾರವನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.
ನಗರದ ಧರ್ಮವೀರ ಸಂಭಾಜಿ ರಾವ ವೃತ್ತದಲ್ಲಿ ಜಮಾಯಿಸಿದ ಎಲ್ಲ ಬ್ಯಾಂಕ ಸಿಬ್ಬಂಧಿಗಳು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆಯನ್ನು ಮುಂದುವರೆಸಿದರು. ಇನ್ನುಳಿದಂತೆ ಎಲ್ಲಾ ಬ್ಯಾಂಕ್ ಸಿಬ್ಬಂಧಿಗಳು ಸ್ಥಳದಲ್ಲಿ ಹಾಜರಿದ್ದರು. ರಾಷ್ಟ್ರವ್ಯಾಪಿಯಾಗಿ ಈ ಮುಷ್ಕರವು ನಡೆದಿದ್ದು, ಬ್ಯಾಂಕ್ ವಹಿವಾಟುಗಳಲ್ಲಿ ಸಾಕಷ್ಟು ವ್ಯತ್ಯಯವಾಗಲಿದೆ.