ಖಾತೆ ಹಂಚಿಕೆ ವಿಚಾರ: ರಮೇಶ್ ಜಾರಕಿಹೊಳಿ ಮನವೊಲಿಸುವ ಜವಾಬ್ದಾರಿ ಸತೀಶ್ ಜಾರಕಿಹೊಳಿ ಹೆಗಲಿಗೆ – ಕಹಳೆ ನ್ಯೂಸ್
ಖಾತೆ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೇಸ್ ಪಾಳಯದಲ್ಲಿ ಮನಸ್ತಾಪ ಹೆಚ್ಚಾಗಿದ್ದು. ಇದೀಗ ಸಚಿವ ಸ್ಥಾನ ವಂಚಿತರಾಗಿ ಅಸಮಾಧಾನಗೊಂಡು ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿರುವ ರಮೇಶ್ ಜಾರಕಿಹೊಳಿ ಅವರ ಮನವೊಲಿಸುವ ಜವಾಬ್ದಾರಿಯನ್ನು ಕಾಂಗ್ರೆಸ್ ಹೈಕಮಾಂಡ್ ಸತೀಶ್ ಜಾರಕಿಹೊಳಿ ಹೆಗಲಿಗೆ ನೀಡಿದೆ.
ನಾನು ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ಇದುವರೆಗೂ ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿಲ್ಲ, ಶೀಘ್ರವೇ ಅವರನ್ನು ಭೇಟಿ ಮಾಡಿ ರಾಜಿನಾಮೆ ನೀಡದಂತೆ ಮನವೊಲಿಸುವುದಾಗಿ ಸತೀಶ್ ತಿಳಿಸಿದ್ದಾರೆ.
ರಮೇಶ್ ಸಚಿವರಾಗಿದ್ದ ವೇಳೆ ತಮ್ಮ ವರ್ತನೆ ಬದಲಿಸಿಕೊಳ್ಳುವಂತೆ ಅವರಿಗೆ ಸಲಹೆ ನೀಡಿದ್ದೆ, ಅಧಿಕಾರಿಗಳ ಜೊತೆ ಸಭೆ ನಡೆಸಿ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ತಿಳಿಸಿದ್ದೆ, ಆದರೆ ಅದನ್ನು ಅವರು ಮಾಡಲಿಲ್ಲ, ಈಗಲಾದರೂ ಅವರು ತಮ್ಮ ವರ್ತನೆ ಬದಲಿಸಿಕೊಳ್ಳಬೇಕು ಎಂದು ಸತೀಶ್ ತಿಳಿಸಿದ್ದಾರೆ.