ದೇವರ ನಾಡು ಕೇರಳದ ಶಬರಿಮಲೆ ಸನ್ನಿದಿಯಲ್ಲಿ ಶತಮಾನ ಕಾಲದಿಂದಲೂ ಶಬರಿಮಲೆ ಅಯ್ಯಪ್ಪ ಸನ್ನಿಧಾನದಲ್ಲಿ ನಡೆದುಕೊಂಡು ಬಂದಿರುವ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗಬೇಕೆಂಬ ಆಶಯದೊಂದಿಗೆ ಕೇರಳ ರಾಜ್ಯದಲ್ಲಿ ನಿನ್ನೆ ಬೃಹತ್ ಅಯ್ಯಪ್ಪ ಜ್ಯೋತಿ ಆಂದೋಲನ ನಡೆಯಿತು.
ಕಾಸರಗೋಡಿನ ಹೊಸಂಗಡಿಯಿಂದ ಹಿಡಿದು ಕನ್ಯಾಕುಮಾರಿಯವರೆಗೆ ೭೯೫ ಕಿಮೀ ಉದ್ದದ ಮಾರ್ಗದಲ್ಲಿ ೨೦ ಲಕ್ಷಕ್ಕೂ ಹೆಚ್ಚು ಭಕ್ತರು ಸಂಜೆ ೬ರಿಂದ ೬.೩೦ರವರೆಗೆ ಜ್ಯೋತಿ ಬೆಳಗುವ ಮೂಲಕ ಅಯ್ಯಪ್ಪನ ಮಂತ್ರ ಜಪಿಸಿದರು. ಶಬರಿಮಲೆ ಕರ್ಮ ಸಮಿತಿ ಮತ್ತು ಬಿಜೆಪಿ ಈ ಕಾರ್ಯಕ್ರಮ ಆಯೋಜಿಸಿದ್ದು, ಲಕ್ಷಾಂತರ ಭಕ್ತರು ಈ ದೀಪ ಆಂದೋಲನದಲ್ಲಿ ಪಾಲ್ಗೊಂಡರು.
೨೦೧೯ ಜ.೧ರಂದು ಕೇರಳ ಸರ್ಕಾರ ರಾಜ್ಯದುದ್ದಕ್ಕೂ ಮಹಿಳಾ ಗೋಡೆ ಕಾರ್ಯಕ್ರಮ ಆಯೋಜಿಸಲಾಗಿದೆ. ಶಬರಿಮಲೆ ವಿವಾದದಿಂದ ಸಂಪ್ರದಾಯಕ್ಕೆ ಉಂಟಾದ ಧಕ್ಕೆಯನ್ನು ಸರಿಪಡಿಸಲು ಎಂಬಂತೆ ಕಾರ್ಯಕ್ರಮ ಆಯೋಜಿಸಿದೆ. ಇದಕ್ಕೆ ಪ್ರತಿಯಾಗಿ ಹಿಂದೂ ಸಂಘಟನೆಗಳು ಅಯ್ಯಪ್ಪ ಜ್ಯೋತಿ ಕಾರ್ಯಕ್ರಮ ಹಮ್ಮಿಕೊಂಡಿದ್ದವು.