ಪುತ್ತೂರು: ಗುರುಕುಲ ಶಿಕ್ಷಣ ಪದ್ಧತಿಯಿದ್ದ ಕಾಲದಲ್ಲಿ ಮೌಲ್ಯಾಧಾರಿತವಾದ ಶಿಕ್ಷಣ ಪದ್ಧತಿ ಕಾಣಬಹುದಾಗಿತ್ತು. ಆದರೆ ವಿದೇಶಿಯರ ದಾಳಿಯಿಂದ ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಮೌಲ್ಯಾಧಾರಿತವಾದ ವಿಚಾರಗಳು ಮರೆಯಾದವು. ಮನುಷ್ಯನ್ನನು ಮನುಷ್ಯನನ್ನಾಗಿಸುವ ಕೆಲಸ ಹಿಂದಿನ ಗುರುಕುಲ ಶಿಕ್ಷಣ ಪದ್ಧತಿಯಿಂದ ಆಗುತ್ತಿತ್ತುಎಂದು ವಿವೇಕಾನಂದ ಪದವಿ ಕಾಲೇಜಿನ ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ರವಿಕಲಾ ಹೇಳಿದರು.
ಅವರು ಕಾಲೇಜಿನ ಐಕ್ಯುಎಸಿ ಸಹಯೋಗದಲ್ಲಿ ಎನ್‌ಎಸ್‌ಎಸ್ ಘಟಕವು ಸಾರಡ್ಕ ಸಮೀಪದ ಮೂಡಂಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿ ಮೌಲ್ಯಾಧರಿತ ಶಿಕ್ಷಣ ಮತ್ತು ದೇಶದ ಪ್ರಗತಿ ಎಂಬ ವಿಷಯದ ಕುರಿತು ಮಂಗಳವಾರ ಉಪನ್ಯಾಸ ನೀಡಿದರು.
ಸ್ವಾತಂತ್ರ್ಯ ನಂತರ ಆಡಳಿತ ನಡೆಸಿದ ಸರ್ಕಾರಗಳು ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ಹಲವಾರು ರೀತಿಯ ಮಾರ್ಪಾಡುಗಳನ್ನು ಮಾಡಿದವು. ಕಡ್ಡಾಯ ಶಿಕ್ಷಣ ಪದ್ಧತಿ ಭಾರತೀಯ ಶಿಕ್ಷಣ ಪದ್ಧತಿಯಲ್ಲಾದ ಬಹುದೊಡ್ಡ ಬದಲಾವಣೆ. ಇಂದು ದೇಶದಲಿ ್ಲಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಧನಾತ್ಮಕವಾದ ಬೆಳವಣಿಗೆ. ಜತೆಗೆ ಶಿಕ್ಷಣ ಪದ್ಧತಿಯಲ್ಲಿ ವ್ಯಕ್ತಿತ್ವ ವಿಕಾಸವಾಗುವಂತಹ ಕೆಲಸಗು ಆಗಬೇಕಿವೆ ಎಂದು ನುಡಿದರು.
ಶಿಕ್ಷಣ ವ್ಯವಸ್ಥೆಯಲ್ಲಿ ಇಂದು ಅಂಕಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಕಡಿಮೆಯಾಗುತ್ತಿದೆ. ಹಣದ ಆಸೆಗಾಗಿ ಇಂದಿನ ವಿದ್ಯಾರ್ಥಿಗಳು ವಿದೇಶಗಳಿಗೆ ಹೋಗುತ್ತಿದ್ದಾರೆ. ಶಿಕ್ಷಣದಲ್ಲಿ ಮೌಲ್ಯಾಧಾರಿತವಾದ ವಿಚಾರಗಳು ಕಡಿಮೆಯಾಗಿರುವುದರಿಂದ ಇಂದಿನ ಯುವಜನತೆ ಭಯೋತ್ಪಾದನೆಯಂತ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿವೆ. ಆಧುನಿಕ ಶಿಕ್ಷಣ ಈ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕಿದೆ ಎಂದರು.
ವಿವೇಕಾನಂದ ಪದವಿ ಕಾಲೇಜಿನ ವಾಣಿಜ್ಯ ಶಾಸ್ತ್ರ ಉಪನ್ಯಾಸಕ ಪುನೀತ್‌ಕೆ.ಎಸ್ ಮಾತನಾಡಿ ಉನ್ನತವಾದ ಶಿಕ್ಷಣವನ್ನು ಹೊಂದಿದ್ದರೂ ಹೆಚ್ಚಿನ ಜನರಲ್ಲಿ ಮಾನವೀಯ ಗುಣಗಳು ಇರುವುದಿಲ್ಲ. ಇಂದು ಆಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ವಿದ್ಯಾವಂತರೇ ಕಾರಣ ಎಂದರು.
ಕಾರ‍್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವೇಕಾನಂದ ಪದವಿ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕಿ ಅಮೃತಾ ಶ್ಯಾನುಭೋಗ್ ಮಾತನಾಡಿ ವಿದ್ಯಾರ್ಜನೆ ಮಾಡುವಾಗ ಮೌಲ್ಯಯುತವಾದ ವಿಚಾರಗಳನ್ನು ಪಡೆದುಕೊಳ್ಳಬೇಕು. ಹಿರಿಯರನ್ನು ಗೌರವಿಸುವ ಗುಣವನ್ನು ಬೆಳೆಸಿಕೊಳ್ಳಬೇಕು. ಮಾನವೀಯ ಮೌಲ್ಯಗಳನ್ನು ತಿಳಿಸುವ ಶಿಕ್ಷಣ ಇಂದು ಕಡಿಮೆಯಾಗುತ್ತಿದೆ ಎಂದರು.
ವಿದ್ಯಾರ್ಥಿನಿಯರಾದ ಶೀತಲ, ನಿರೀಕ್ಷ, ಶ್ರಾವ್ಯ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಚೈತ್ರ ಸ್ವಾಗತಿಸಿದರು. ವಿದ್ಯಾರ್ಥಿ ಸಂತೋಷ್ ಎಂ ವಂದಿಸಿದು. ವಿದ್ಯಾರ್ಥಿನಿ ದೀಕ್ಷಾ ಕಾರ‍್ಯಕ್ರಮ ನಿರೂಪಿಸಿದರು.