ಐತಿಹಾಸಿಕ ಅಮೃತಮಹೋತ್ಸವ ಹಾಗೂ ದ್ವಿತೀಯ ವಿಶ್ವಹವ್ಯಕ ಸಮ್ಮೇಳನಗಳಿಗೆ ಭರ್ಜರಿ ಸಿದ್ಧತೆ ನಡೆದಿದ್ದು, ಅಮೃತಮಹೋತ್ಸದ ಉದ್ಘಾಟನಾ ಸಮಾರಂಭ ಅರಮನೆ ಮೈದಾನದ ರಾಯಲ್ ಸೆನೆಟ್ ಸಭಾಂಗಣದಲ್ಲಿ ನಡೆಯಲಿದೆ.
ಪರಮಪೂಜ್ಯ ಜಗದ್ಗುರು ಶಂಕರಾಚರ‍್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹಾಗೂ ಸುಬ್ರಹ್ಮಣ್ಯದ ಪರಮಪೂಜ್ಯ ಶ್ರೀಶ್ರೀ ವಿದ್ಯಾಪ್ರಸನ್ನ ತರ‍್ಥ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯವನ್ನು ಕರುಣಿಸಲಿದ್ದು, ಘನ ರಾಜ್ಯಪಾಲರಾದ ಶ್ರೀ ವಾಜುಬಾಯಿ ವಾಲಾ ಕಾರ‍್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ.
ನ್ಯಾ ಶಿವರಾಜ್ ಪಾಟೀಲ್ ಸ್ಮರಣ ಸಂಚಿಕೆಯ ಲೋಕಾರ್ಪಣೆ ಮಾಡಲಿದ್ದು, ಶ್ರೀ ಯಡಿಯುರಪ್ಪ, ಶ್ರೀ ಆರ್ ವಿ ದೇಶಪಾಂಡೆ, ಶ್ರೀ ಪಿ ಜಿ ಆರ್ ಸಿಂಧ್ಯಾ, ಶ್ರೀ ವೆಂಕಟನಾರಾಯಣ್, ಶ್ರೀ ರವಿ ಹೆಗಡೆ ಹಾಗೂ ಸಮ್ಮೇಳನದ ಗೌರವಾಧ್ಯಕ್ಷ್ಘರಾದ ಶ್ರೀ ಭೀಮೇಶ್ವರ ಜೋಷಿ ಉಪಸ್ಥಿತರಿರುವರು.
ಪುಸ್ತಕ ಲೋಕಾರ್ಪಣೆ – ಲಿಮ್ಕಾ ದಾಖಲೆ
ಐತಿಹಾಸಿಕ ಸಂರ‍್ಭದಲ್ಲಿ ೧೦೦ ಪುಸ್ತಕಗಳ ಲೋಕಾರ್ಪಣೆ ಏಕಕಾಲದಲ್ಲಿ ನಡೆಯಲಿದ್ದು, ಏಕಕಾಲದಲ್ಲಿ ಏಕ ಸಂಸ್ಥೆಯಿಂದ, ಏಕ ಸ್ಥಳದಲ್ಲಿ ಲೋಕಾರ್ಪಣೆಯಾಗುವ ಈ ಬೃಹತ್ ಕಾರ‍್ಯ ಲಿಮ್ಕಾ ಬುಕ್ ಆಫ್ ರೆಕರ‍್ಡ್’ನಲ್ಲಿ ದಾಖಲಿಸಲಾಗುತ್ತದೆ. ಈ ಕರ‍್ಯಕ್ರಮದಲ್ಲಿ ಮಲ್ಲೇಪುರಂ ವೆಂಕಟೇಶ್, ಹರಿಕೃಷ್ಣ ಪುನರೂರು, ವಿದ್ಯಾವಾಚಸ್ಪತಿ ಅರಳುಮಲ್ಲಿಗೆ ಪರ‍್ಥಸಾರಥಿ ಮುಂತಾದ ಗಣ್ಯರು ಉಪಸ್ಥಿತರಿರಲಿದ್ದಾರೆ.
೭೫ ವೇದ ವಿದ್ವಾಂಸರಿಗೆ ಸನ್ಮಾನ
ನಾಡಿನ ೭೫ ಶ್ರೇಷ್ಠ ವಿದ್ವಾಂಸರಿಗೆ “ಹವ್ಯಕ ವೇದರತ್ನ” ಸನ್ಮಾನ ಕರ‍್ಯಕ್ರಮ ಸಂಜೆ ೪ ಗಂಟೆಗೆ ನಡೆಯಲಿದ್ದು, ಕಬ್ಬಿನಾಲೆ ವಸಂತ ಭಾರಧ್ವಾಜ್, ಕೆ ಎಲ್ ಶಂಕರನಾರಾಯಣ್ ಜೋಯ್ಸ್, ಅಶೋಕ್ ಹರ‍್ನಌ, ಪಳ್ಳತ್ತಡ್ಕ ಶಂಕರನಾರಾಯಣ ಭಟ್ ಮುಂತಾದ ಹಿರಿಯ ವಿದ್ವಾಂಸರು ಸನ್ಮಾನ ಕರ‍್ಯಕ್ರಮವನ್ನು ನಡೆಸಿಕೊದಲಿದ್ದಾರೆ.
೭೫ ಯಾಗ ಮಂಟಪಗಳು ಹಾಗೂ ಮಂಡಲಗಳ ಪ್ರದರ್ಶನ
ಯಜ್ಞ ಯಾಗಗಳು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು, ಇಷ್ಟರ‍್ಥಸಿದ್ಧಿಯಿಂದ ಹಿಡಿದು ಪ್ರಮರ‍್ಥ ಪ್ರಾಪ್ತಿಯವರೆಗೆ ಯಜ್ಞಗಳ ವ್ಯಾಪ್ತಿಯಿದೆ. ನಮ್ಮ ಸಂಸ್ಕೃತಿಯ ಭಾಗವಾಗಿರುವ ಯಜ್ಞಗಳ ನಿಯಮಗಳು, ಅದರ ವಿವಿಧತೆಗಳು, ಆಚರಣೆಯ ಬಗೆಗಳು, ಉದ್ದೇಶಗಳು ಮುಂತಾದವನ್ನು ತಿಳಿಸುವ ದೃಷ್ಟಿಯಿಂದ ೭೫ ವಿವಿಧ ರೀತಿಯ ಹೋಮಕುಂಡಗಲ ರ‍್ಶನ, ವಿವಿಧ ರೀತಿಯ ಮಂಡಲಗಳ ರ‍್ಶನ, ಯಜ್ಞಗಳ ಉದ್ದೇಶ ಹಾಗೂ ಫಲದ ಮಾಹಿತಿ, ದಿನಕ್ಕೊಂದು ಯಾಗದ ಪ್ರಾತ್ಯಕ್ಷಿಯತೆ ಮೂರು ದಿನಗಳ ಕಾಲ ನಡೆಯಲಿದೆ.
ಟ್ವಿಟ್ಟರ್ ನಲ್ಲಿ ರಾಷ್ತ್ರೀಯ ಟ್ರೆಂಡ್
ವಿಶ್ವಹವ್ಯಕ ಸಮ್ಮೇಳಕ್ಕೆ ಪೂರಕವಾಗಿ ನಿನ್ನೆ ಖಿತಿiಣಣeಡಿ ಹವ್ಯಕ ಸಂಸ್ಕೃತಿಯನ್ನು ಪರಿಚಯಿಸುವ ಹಾಗೂ ಕರ‍್ಯಕ್ರಮದ ಮಾಹಿತಿಗಳನ್ನು ಹಂಚುವ ಕರ‍್ಯ ನಡೆದಿದ್ದು, ಇದಕ್ಕೆ ಟ್ವಿಟ್ಟರ್ ಲೋಕದಲ್ಲಿ ರ‍್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. #VishwaHavyakaSammelana ಹ್ಯಾಷ್ ಟ್ಯಾಗ್ ರಾಷ್ಟ್ರಮಟ್ಟದಲ್ಲಿ ಮೊದಲನೇ ಟ್ರೆಂಡ್ ಆಗಿ ದೇಶದ ಗಮನ ಸೆಳೆಯಿತು.
ಪಾಕೋತ್ಸವಕ್ಕೆ ೧೦೦ ಕ್ಕೂ ಅಧಿಕ ಪಾಕತಜ್ಣರಿಂದ ತಯಾರಿ
ಮಲೆನಾಡು – ಕರಾವಳಿ ಭಾಗಗಳ ಪಾರಂಪರಿಕ ಹವ್ಯಕ ಪಾಕಗಳು ಈ ಐತಿಹಾಸಿಕ ಕರ‍್ಯಕ್ರಮದ ರುಚಿಯನ್ನು ಹೆಚ್ಚಿಸಲಿದ್ದು, ಪತ್ರೊಡೆ, ಕೊಟ್ಟೆಕಡುಬು, ವಿವಿಧ ರೀತಿಯ ಅವಲಕ್ಕಿಗಳು, ಗೆಣೆಸೆಲೆ, ಜಿಲೇಬಿ, ಅತ್ರಾಸ, ಚಕ್ಕುಲಿ, ಸುಕ್ಕಿನುಂಡೆ, ಕೇಸರಿ, ತಂಬಳಿ, ಪಾಯಸಗಳು, ಹೋಳಿಗೆಗಳು ಜನಾರ‍್ಷಣೆಯ ಕೇಂದ್ರವಾಗಲಿದೆ.ಇವುಗಳ ತಯಾರಿಕೆಯಲ್ಲಿ ೧೦೦ಕ್ಕೂ ಅಧಿಕ ಪಾಕತಜ್ಣರು ತೊಡಗಿಸಿಕೊಂಡಿದ್ದಾರೆ.
“ಹವ್ಯಕ ಜ್ಯೋತಿ”
ಹವ್ಯಕರ ಮೂಲ ಸ್ಥಾನವಾದ ಉತ್ತರಕನ್ನಡದ ಹೈಗುಂದದಿಂದ “ಹವ್ಯಕ ಜ್ಯೋತಿ”ಗೆ ನಿನ್ನೆ ಚಾಲನೆ ನೀಡಲಾಗಿದ್ದು, ಹವ್ಯಪುರಾಧೀಶ್ವರಿ ಶ್ರೀ ದರ‍್ಗಾಂಬಿಕಾ ದೇವಿಯ ಸನ್ನಿಧಿಯಿಂದ ಜ್ಯೋತಿಯನ್ನು ಹಚ್ಚಿಕೊಂಡು ಅಲಂಕೃತ ರಥದಲ್ಲಿ ತರಲಾಗುತ್ತಿದೆ. ಸಿದ್ದಾಪುರ,ಸಾಗರ, ಶಿವಮೋಗ್ಗ ಭಾಗಗಳಿಂದ ರಥದಲ್ಲಿ ಜ್ಯೋತಿಯನ್ನು ತರಲಾಗಿದ್ದು, ಇಂದು ರಾತ್ರಿ ರಥ ನಗರಕ್ಕೆ ಆಗಮಿಸಲಿದೆ.ಇದೇ ಜ್ಯೋತಿಯಿಂದ ನಾಳೆ ದೀಪ ಬೆಳಗುವುದರ ಮೂಲಕ ಐತಿಹಾಸಿಕ ಕರ‍್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ.
ವಿಶೇಷತೆಗಳು :
* ಹವ್ಯಕ ಪಾಕೋತ್ಸವ : ಮಲೆನಾಡು – ಕರಾವಳಿ ಭಾಗಗಳ ಹವ್ಯಕರ ಪಾರಂಪರಿಕ ತಿನಿಸುಗಳ ಉತ್ಸವ
* ಆಲೆಮನೆ : ಹಳ್ಳಿ ಸೊಗಡಿನ ಆಲೆಮನೆ ರಾಜಧಾನಿಯಲ್ಲಿ.
* ೭೫ ಯಾಗ ಹಾಗೂ ಯಜ್ಞ ಮಡಲಗಳ ಪ್ರರ‍್ಶನ
* ಅಡಿಕೆ ಕೃಷಿಯ ಸಮಗ್ರ ರ‍್ಶನ
* ಪಾರಂಪರಿಕ ವಸ್ತುಗಳ ಪ್ರರ‍್ಶನ
* ನಾಡಿನ ಶ್ರೇಷ್ಠ ವಿದ್ವಾಂಸರುಗಳಿಂದ ಗೋಷ್ಠಿಗಳು
* ೭೫ ಶ್ರೇಷ್ಠ ವೇದ ವಿದ್ವಾಂಸರಿಗೆ ಸಮ್ಮಾನ
* ಸಂಜೆ ಗೀತ – ನಾಟ್ಯ – ವೈಭವ