ರಾಜ್ಯದ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಯಾಗಳಿಗೆ ರಾಜ್ಯ ಸರ್ಕಾರ ಹೊಸ ವರ್ಷಕ್ಕೂ ಮುನ್ನ ಬಂಪರ್ ಕೊಡುಗೆ ನೀಡಿದೆ.
ಒಟ್ಟು 1913 ಆಯಾಗಳಿಗೆ ವೇತನ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದ್ದು, ಪ್ರಸ್ತುತ ಇರುವ ಮಾಸಿಕ 6 ಸಾವಿರ ರೂ. ವೇತನವನ್ನು ಈಗ 17 ಸಾವಿರ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ಆಯಾಗಳಿಗೆ ಇನ್ನು ಮುಂದೆ ಆರನೇ ವೇತನ ಆಯೋಗದ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಗ್ರೂಪ್ ಡಿ ದರ್ಜೆ ನೌಕರರ ಕನಿಷ್ಠ ಮೂಲ ವೇತನದಷ್ಟು ನೀಡಲಾಗುತ್ತದೆ.