Sunday, November 24, 2024
ಸುದ್ದಿ

ಸೌಂದರ್ಯದ ಪಟ್ಟ ಮುಡಿಗೇರಿಸಿಕೊಂಡ ಕುಡ್ಲ ಬ್ಯೂಟೀಸ್: ಸಂಗ್ರಹವಾದ ಹಣ ಹಳ್ಳಿ ಅಭಿವೃದ್ಧಿಗೆ – ಕಹಳೆ ನ್ಯೂಸ್

ಮಂಗಳೂರು: ಕುಡ್ಲದಲ್ಲಿ ನಡೆದ ಸೌಂದರ್ಯ ಸ್ಪರ್ಧೆಯೊಂದು ಎಲ್ಲರಿಗೂ ಮಾದರಿಯಾಗಿದೆ. ಇಲ್ಲಿ ನಡೆದ ಮಿಸ್ ಆಂಡ್ ಮಿಸೆಸ್ ಮಂಗಳೂರು ಸೌಂದರ್ಯ ಸ್ಪರ್ಧೆಯಲ್ಲಿ ಸಂಗ್ರಹವಾದ ಹಣವನ್ನು ಹಳ್ಳಿಯೊಂದರ ಅಭಿವೃದ್ಧಿಗೆ ಕೊಡಲಾಗಿದೆ.

ರೀಗೋ ಇವೆಂಟ್ಸ್ ಪ್ರೈವೆಟ್ ಲಿಮಿಟೆಡ್‌ನಿಂದ ಮಂಗಳೂರಿನಲ್ಲಿ ಮಿಸ್ ಆಂಡ್ ಮಿಸೆಸ್ ಮಂಗಳೂರು ೨೦೧೮ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸ್ಪರ್ಧೆಯ ಮುಖ್ಯ ಉದ್ದೇಶವಿದ್ದದ್ದು ಹಳ್ಳಿಯೊಂದಕ್ಕೆ ಕೊಡುಗೆ ನೀಡಬೇಕೆಂಬ ನೆಲೆಯಲ್ಲಿ ಮಿಸ್ ಆಂಡ್ ಮಿಸೆಸ್ ಮಂಗಳೂರು ೨೦೧೮ ಸ್ಪರ್ಧೆಯಲ್ಲಿ ೨೩ ಮಂದಿ ಸ್ಪರ್ಧಿಸಿದ್ದರು. ಈ ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಪಡೆದಂತಹ ಹಣವನ್ನು ಗ್ರಾಮವೊಂದಕ್ಕೆ ಕೊಡುಗೆ ನೀಡಬೇಕೆಂಬ ಉದ್ದೇಶವನ್ನು ಹೊಂದಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ಮೂರು ತಿಂಗಳ ಹಿಂದೆ ಈ ಸ್ಪರ್ಧೆಯಲ್ಲಿ ಭಾಗವಹಿಸುವಂತಹ ಸ್ಪರ್ಧಿಗಳಿಗೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಾಲ್ಪಾಡಿ ಗ್ರಾಮಕ್ಕೆ ಕೊಡುಗೆ ನೀಡಲು ಹಣ ಸಂಗ್ರಹದ ಟಾಸ್ಕ್ ಕೊಡಲಾಗಿತ್ತು. ಕಾರ್ಯ ತತ್ಪರರಾದ ಸ್ಪರ್ಧಿಗಳು ನಿಧಿ ಸಂಗ್ರಹಿಸಿ ವಾಲ್ಪಾಡಿ ಗ್ರಾಮಕ್ಕೆ ಕೊಡುಗೆಯಾಗಿ ನೀಡಿದ್ದಾರೆ.

ಅಂಕ ಮತ್ತು ಅವರಿಗೆ ನೀಡಲಾದ ಇತರ ಟಾಸ್ಕ್ನ ಅಂಕ ಸೇರಿಸಿ ಅವರಲ್ಲಿ ಆಯ್ಕೆ ಮಾಡಲಾಗಿದೆ.ಅವರು ಸಂಗ್ರಹಿಸಿದ ನಿಧಿಯ ಮೂಲಕ ಖರೀದಿಸಲಾದ ವಸ್ತುಗಳನ್ನು ತೀರಾ ಗ್ರಾಮೀಣ ಪ್ರದೇಶವಾದ ವಾಲ್ಪಾಡಿ ಗ್ರಾಮಕ್ಕೆ ಹಂಚಲಾಗಿದೆ. ಬ್ಲಾಂಕೆಟ್, ಸ್ಕೂಲ್ ಬ್ಯಾಗ್, ಡ್ರಾಯಿಂಗ್ ಕಿಟ್ಸ್ ನ್ನು ಶಾಲಾ ಮಕ್ಕಳಿಗೆ ನೀಡಲಾಗಿದೆ.

೩೦ ಬಡ ಕುಟುಂಬಗಳಿಗೆ ದಿನಬಳಕೆ ವಸ್ತುಗಳನ್ನು ನೀಡಲಾಯಿತು. ಗ್ರಾಮದಲ್ಲಿನ ಶಾಲೆಗೆ ಕೇರಂ ಬೋರ್ಡ್, ವಾಲಿಬಾಲ್, ಥ್ರೋ ಬಾಲ್, ಕ್ರಿಕೆಟ್ ಕಿಟ್, ಶಾಲಾ ವಾರ್ಷಿಕೋತ್ಸವ ದಿನಕ್ಕೆ ಸರ್ಟಿಫಿಕೇಟ್, ಪದಕಗಳನ್ನು ನೀಡಲಾಯಿತು.

ಮಿಸ್ ಮಂಗಳೂರು ವಿಭಾಗದಲ್ಲಿ ಅಮಂಡ ಲಸ್ರಾದೋ ವಿಜಯಿಯಾದರೆ, ನಿಶಿತಾ ಫರ್ನಾಂಡೀಸ್ ಫಸ್ಟ್ ರನ್ನರ್ ಅಫ್, ಪ್ರಜ್ಞಾ ದ್ವಿತೀಯ ರನ್ನರ್ ಅಫ್ ಆದರು. ಮಿಸೆಸ್ ಮಂಗಳೂರು ವಿಭಾಗದಲ್ಲಿ ಲಿವಿಯ ಡಿ ಆಲ್ಮೇಡಿಯ ವಿಜಯಿಯಾದರೆ, ತೇಜಶ್ವಿನಿ ಶೆಟ್ಟಿ ಫರ್ಸ್ಟ್ ರನ್ನರ್ ಅಫ್, ಅನಿತಾ ಸೋನ್ಸ್ ದ್ವಿತೀಯ ರನ್ನರ್ ಅಪ್ ಆದರು.

ಸಾಮಾಜಿಕ ಸೇವೆ ಮಾಡುವ ಬಗ್ಗೆ ಜಾಗೃತಿ ಮೂಡಿಸುವ ಸಂದೇಶವನ್ನಿಟ್ಟುಕೊಂಡು, ಸ್ಪರ್ಧಿಗಳಲ್ಲಿ ಸಮಾಜಸೇವೆಯ ಚಿಂತನೆ ಮೂಡಿಸಿದ ಈ ಸೌಂದರ್ಯ ಸ್ಪರ್ಧೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.