ತುಮಕೂರು: ಸಿದ್ದಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಮತ್ತೆ ಏರಿಳಿತವಾಗಿದೆ. ಶ್ರೀಗಳಿಗೆ ಕಫ ಹೆಚ್ಚಾಗಿ ಉಸಿರಾಟದಲ್ಲಿ ಸ್ವಲ್ಪ ಏರುಪೇರಾಗಿದೆ.
ಶ್ರೀಗಳು ಈಗ ಆಕ್ಸಿಜನ್ ಮೂಲಕ ಉಸಿರಾಡುತ್ತಿದ್ದಾರೆ. ವೈದ್ಯರು ಶ್ರೀಗಳಿಗೆ ಮೂಗಿನ ಮೂಲಕ ಗ್ಲೂಕೋಸ್ ನೀಡುತ್ತಿದ್ದಾರೆ.
ಸ್ವಾಮೀಜಿಗಳಿಗೆ ಹೈಯರ್ ಆಂಟಿಬಯೋಟಿಕ್ ಹಾಗೂ ಫಿಸಿಯೋತೆರಪಿ ಚಿಕಿತ್ಸೆ ನೀಡಲಾಗುತ್ತಿದೆ. ಸಿದ್ದಗಂಗಾ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಶ್ರೀಗಳ ಮೇಲೆ ನಿಗಾ ವಹಿಸಿದ್ದಾರೆ.