ಬೆಂಗಳೂರು: ಪಬ್, ರೆಸ್ಟೋರೆಂಟ್‌ಗಳ ಅವಧಿಯನ್ನು ಡಿ. ೩೧ರಂದು ತಡರಾತ್ರಿ ೨ ಗಂಟೆವರೆಗೆ ವಿಸ್ತರಿಸಲಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬೆಂಗಳೂರು ಪೋಲಿಸ್ ಆಯುಕ್ತರುಹೇಳಿದ್ದಾರೆ.
ಇದೇ ವೇಳೆ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಇಂದಿರಾನಗರ, ಕೋರಮಂಗಲ ಸೇರಿದಂತೆ ನಗರದ ನಾನಾ ಭಾಗಗಳಲ್ಲಿ ಹೊಸ ವರ್ಷಾಚರಣೆ ಜೋರಾಗಿರುತ್ತದೆ. ನಾಗರಿಕರ ಸುರಕ್ಷತೆಗಾಗಿ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಜನರು ಖುಷಿಯಿಂದ ಹೊಸ ವರ್ಷ ಆಚರಿಸಬಹುದು. ಬೇರೆಯವರಿಗೆ ತೊಂದರೆ ಕೊಟ್ಟರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ಆಯುಕ್ತರು ಎಚ್ಚರಿಸಿದ್ದಾರೆ.
ಇನ್ನು ಖಾಸಗಿಯಾಗಿ ಪಾರ್ಟಿ ಆಯೋಜಿಸುವವರು ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಅಬ್ಬರದ ಸಂಗೀತ ಹಾಕಿ ಜನರಿಗೆ ತೊಂದರೆ ಕೊಡುವಂತಿಲ್ಲ. ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಕ್ರಮ ತಗೆದುಕೊಳ್ಳಬೇಕು ಎಂದು ಎಂದು ಸುನಿಲ್ ಕುಮಾರ್ ಮನವಿ ಮಾಡಿದರು.
ಇದಲ್ಲದೇ ನಗರದಾದ್ಯಂತ ೨೭೦ ಹೊಯ್ಸಳ ವಾಹನ ಹಾಗೂ ೧,೨೦೦ ಚೀತಾ ಬೈಕ್‌ಗಳಲ್ಲಿ ಪೊಲೀಸರು ಗಸ್ತು ತಿರುಗಲಿದ್ದಾರೆ. ಜನರು ದೂರು ನೀಡಿದರೆ ಕೆಲ ನಿಮಿಷಗಳಲ್ಲೇ ಪೊಲೀಸರು ಸ್ಥಳಕ್ಕೆ ಧಾವಿಸಲಿದ್ದಾರೆ.