ಪುತ್ತೂರು: ಪುತ್ತೂರಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಇಂದು ತ್ರೈಮಾಸಿಕ ಸಭೆ ನಡೆಯಿತು. ಪುತ್ತೂರು ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೃಷಿ, ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ, ಮೂಲಸೌಕರ್ಯಗಳ ಕುರಿತು ಚರ್ಚಿಸಿದರು.
ನೆಲ್ಯಾಡಿ ಪ್ರಾಥಾಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಆಶಿಶ್ ಕುಮಾರ್, ನಾಯಿ ಕಡಿತಗೊಂಡು ಮರಣಹೊಂದಿದ್ರು. ಮರಣೋತ್ತರ ಪರೀಕ್ಷೆಯ ಸಮಗ್ರ ತನಿಖಾ ವರದಿಯನ್ನು ತರಿಸಿ ಶಾಸಕರು ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದರು.
ಇನ್ನು ಅಂಗನವಾಡಿ ನಿರ್ಮಾಣಕ್ಕೆ ಸ್ಥಳದ ಕೊರತೆಯಿದ್ದು, ಅತೀ ಶೀಘ್ರದಲ್ಲಿ ಸ್ಥಳಾವಕಾಶವನ್ನು ಕಲ್ಪಿಸುವ ಬಗ್ಗೆ ಚರ್ಚಿಸಲಾಯಿತು. ಆನೆಗಳು ಕೃಷಿ ಜಮೀನಿಗೆ ಬಂದು ತೊಂದರೆ ನೀಡುವುದರಿಂದ ಆನೆಗಳನ್ನು ಸ್ಥಳಾಂತರ ಮಾಡುವಂತೆ ಪಂಚಾಯತ್ ಸದಸ್ಯರು ಮೇಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಮಾಡುವಂತೆ ಸೂಚಿಸಲಾಯಿತು.
ಹಾಗೆಯೇ ಕೋವಿ ಲೈಸನ್ಸ್ ನೀಡುವ ಅಧಿಕಾರದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಈ ಕಾರ್ಯಕ್ರಮದಲ್ಲಿ ತಾ. ಪಂ ಅಧ್ಯಕ್ಷ ರಾಧಕೃಷ್ಣ ಬೋರ್ಕರ್, ಉಪಾದ್ಯಕ್ಷೆ ರಾಜೇಶ್ವರಿ, ತಹಶಿಲ್ದಾರ್ ಅನಂತ್ ಶಂಕರ್ ಮತ್ತಿತ್ತರರು ಉಪಸ್ಥಿತರಿದ್ದರು.