Recent Posts

Sunday, January 19, 2025
ಸುದ್ದಿ

ಶ್ರೀರಾಮನನ್ನು ಕೆಟ್ಟದಾಗಿ ಬಿಂಬಿಸಿದ ಭಗವಾನ್​ ನಮ್ಮೊಂದಿಗೆ ಚರ್ಚೆಗೆ ಬರಲಿ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಪೇಜಾವರ ಶ್ರೀ ಸವಾಲು – ಕಹಳೆ ನ್ಯೂಸ್

ಬೆಂಗಳೂರು: ಶ್ರೀರಾಮನ ಬಗ್ಗೆ ಕೆಟ್ಟದಾಗಿ ಬರೆದಿರುವ ಭಗವಾನ್​ ವಿರುದ್ಧ ಪೇಜಾವರ ಶ್ರೀಗಳು ಗರಂ ಆಗಿದ್ದು, ಚರ್ಚೆಗೆ ಬನ್ನಿ ಎಂದು ಆಹ್ವಾನ ನೀಡಿದ್ದಾರೆ.

ಭಗವಾನ್​ ಅವರಿಗೆ ನಾನು ಅವರಿಗೆ ಈಗಾಗಲೇ ಎರಡು ಬಾರಿ ಉತ್ತರ ನೀಡಿದ್ದೇನೆ. ಈಗಲೂ ನನ್ನೊಂದಿಗೆ ಚರ್ಚೆಗೆ ಬರಲಿ. ರಾಮ ಶೂದ್ರ ವಿರೋಧಿಯಲ್ಲ. ರಾಮ ನಿರಪರಾಧಿ. ವಿವಾದಗಳೆಲ್ಲ ಶುದ್ಧ ಸುಳ್ಳು ಎಂದು ಮಾಧ್ಯಮ ಹೇಳಿಕೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಹಿಂದೆ ನಿಂತು ಮಾತನಾಡುವುದಲ್ಲ. ರಾಮನ ವಿಚಾರದಲ್ಲಿ ಅವರು ಮಾಡಿರುವ ಎಲ್ಲ ಆರೋಪಗಳಿಗೆ ಉತ್ತರ ನೀಡಲು ನಾನು ಸಿದ್ಧನಿದ್ದೇನೆ. ಭಗವಾನ್​ಗೆ ಭಗವದ್ಗೀತೆ ಬಗ್ಗೆ ಅರಿವಿಲ್ಲ. ಮಹಾತ್ಮ ಗಾಂಧೀಜಿಯವರ ಬಗ್ಗೆಯೂ ಕೆಟ್ಟದಾಗಿ ಬಿಂಬಿಸಿದ್ದಾರೆ. ಅವರಿಗೆ ಒಳ್ಳೆಯದು ಏನೂ ಕಾಣುವುದಿಲ್ಲ ಎಂದಿದ್ದಾರೆ.

ವಿವಾದಾತ್ಮಕ ಹೇಳಿಕೆ ನೀಡಿರುವ ಭಗವಾನ್​ಗೆ ರಕ್ಷಣೆ ಈಗ ಅನಿವಾರ್ಯ. ಪ್ರಜೆಗಳ ರಕ್ಷಣೆ ಮಾಡಬೇಕಲ್ಲ. ಇದೇ ತರ ಮಾತನಾಡುತ್ತಿದ್ದರೆ ಮುಂದೆ ಕಷ್ಟವಿದೆ. ಸರ್ಕಾರ ತನ್ನ ಕರ್ತವ್ಯ ಮಾಡುತ್ತಿದೆ. ಆದರೆ ಅವರು ಸರ್ಕಾರಕ್ಕೆ ಕಷ್ಟ ಕೊಡಬಾರದು ಎಂದರು.