ಪುತ್ತೂರು : ವಿಶ್ವ ಹಿಂದು ಪರಿಷದ್ ವತಿಯಿಂದ ನವೆಂಬರ್ 24,25,26 ರಂದು ದೇಶದ 2000 ಸಂತರ ನೇತ್ರತ್ವದಲ್ಲಿ ಉಡುಪಿಯಲ್ಲಿ ನಡೆಯುವ ಹಿಂದು ಸಮಾಜದ ಧರ್ಮಚಾರ್ಯರ ಮತ್ತು ಪೀಠಾಧಿಪತಿಗಳ ಮಹಾ ಸಭೆ “ಧರ್ಮ ಸಂಸದ್” ಕಾರ್ಯಕ್ರಮ ದ ಪೂರ್ವಭಾವಿಯಾಗಿ ಪುತ್ತೂರು ಜಿಲ್ಲಾ ಕಾರ್ಯಾಲಯವು ಪುತ್ತೂರಿನ ವಿಶ್ವ ಹಿಂದು ಪರಿಷದ್ ಬಜರಂಗದಳ ಕಾರ್ಯಲಯ ದಲ್ಲಿ ಉದ್ಘಾಟನೆ ಗೂಂಡಿತು.
ಪುತ್ತೂರಿನ ಖ್ಯಾತ ಉದ್ಯಮಿ ಧರ್ಮ ಸಂಸದ್ ನ ಸ್ವಾಗತ ಸಮಿತಿ ಸದಸ್ಯರಾದ ಬಲರಾಮ ಅಚಾರ್ಯ ರವರು ದೀಪ ಬೆಳಗಿಸಿ ಕಾರ್ಯಲಯ ವನ್ನು ಉದ್ಘಾಟನೆ ಮಾಡಿದರು.
ವೇದಿಕೆಯಲ್ಲಿ ಬಜರಂಗದಳ ಪ್ರಾಂತ ಗೋ ರಕ್ಷ ಪ್ರಮುಖ್ ಮುರಳೀ ಕ್ರಷ್ಣ ಹಸಂತ್ತಡ್ಕ,ವಿಶ್ವ ಹಿಂದು ಪರಿಷದ್ ನ ಜಿಲ್ಲಾ ಅಧ್ಯಕ್ಷರಾದ ಡಾ.ಕ್ರಷ್ಣ ಪ್ರಸನ್ನ,ವಿಶ್ವ ಹಿಂದು ಪರಿಷದ್ ನ ಜಿಲ್ಲಾ ಕಾರ್ಯದರ್ಶೀ ಸತೀಶ್ ಬಿ.ಎಸ್ ಉಪಸ್ಥಿತಿರಿದ್ದರು.
ವಿಶ್ವ ಹಿಂದು ಪರಿಷದ್ ನ ಪುತ್ತೂರು ಪ್ರಖಂಡ ಕಾರ್ಯದರ್ಶಿ ನವೀನ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮ ದಲ್ಲಿ ಬಜರಂಗದಳ ಜಿಲ್ಲಾ ಸಹ ಸಂಚಾಲಕ್ ಶ್ರೀಧರ್ ತೆಂಕಿಲ, ಪ್ರಖಂಡ ಸಹ ಸಂಚಾಲಕ್ ಹರೀಶ್ ಕುಮಾರ್ ದೋಳ್ಪಾಡಿ,ಪ್ರಖಂಡ ವ ಉಪಾಧ್ಯಕ್ಷರಾದ ವಸಂತ ಕಬಕ,ಪ್ರಖಂಡ ಸಾಪ್ತಾಹಿಕ್ ಮಿಲನ್ ಪ್ರಮುಖ್ ಜೀತೆಶ್ ಬಲ್ನಾಡ್,ಪ್ರಖಂಡ ಸಂಪರ್ಕ ಪ್ರಮುಖ್ ಭರತ್ ಕಾವು,ಮಾತೃಮಂಡಳಿ ಪ್ರಮುಖರಾದ ಮೋಹಿನಿ ದಿವಾಕರ್,ಸತ್ಸಂಗ ಪ್ರಮುಖ್ ಪ್ರಭಾ ಅಚಾರ್ಯ,ಸುಕೀರ್ತಿ,ಸುಜಾತ ಪರ್ಲಡ್ಕ,ಜಯಲಕ್ಷ್ಮಿ,ದುರ್ಗಾವಾಹಿನಿ ಯ ಅರ್ಪನಾ,ಬಾಜಪ ನಗರ ಅಧ್ಯಕ್ಷರಾದ ಜೀವಂದರ್ ಜೈನ್ ಉಪಸ್ಥಿತರಿದ್ದರು.