Recent Posts

Sunday, January 19, 2025
ಸುದ್ದಿ

ರೈಲು ದುರಂತವನ್ನು ತಪ್ಪಿಸಲು ಬಾಲಕರು ಮಾಡಿದ್ದೇನು? – ಕಹಳೆ ನ್ಯೂಸ್

ಕುಮಟಾ: ಇಬ್ಬರು ಬಾಲಕರು ತೋರಿದ ಸಮಯ ಪ್ರಜ್ಞೆಯಿಂದಾಗಿ ದೊಡ್ಡ ರೈಲು ದುರಂತವೊಂದು ತಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆ ಕುಮಟಾ ಬಳಿ ನಡೆದಿದೆ.
ಕುಮಟಾದ ಮೂರೂರು ರಸ್ತೆಯಲ್ಲಿನ ಬಿಸಿಎಂ ಹಾಸ್ಟೆಲ್ ನಲ್ಲಿರುವ 9ನೇ ತರಗತಿ ವಿದ್ಯಾರ್ಥಿ ಮಂಜುನಾಥ ನಾರಾಯಣ ರೆಡ್ಡಿ ಹಾಗೂ 8 ನೇ ತರಗತಿ ವಿದ್ಯಾರ್ಥಿ ಶಶಿಕುಮಾರ ವಿನಾಯಕ ನಾಯ್ಕ ಸಮಯಪ್ರಜ್ಞೆ ತೋರಿದ ಬಾಲಕರಾಗಿದ್ದಾರೆ. ಇವರು ಕಾಡು ಹಣ್ಣುಗಳನ್ನು ಆರಿಸಲು ಹಳಕಾರ ಬೆಟ್ಟಕ್ಕೆ ತೆರಳುತ್ತಿದ್ದ ವೇಳೆ ಟ್ರಾಕ್ ಬದಲಾವಣೆ ಜಾಗದಲ್ಲಿ ಹಳಿ ತುಂಡಾಗಿರುವುದನ್ನು ಗಮನಿಸಿದ್ದಾರೆ. ಕೂಡಲೇ ಈ ಕುರಿತು ರೈಲ್ವೆ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಇದರಿಂದ ಜಾಗೃತಗೊಂಡ ರೈಲ್ವೆ ಸಿಬ್ಬಂದಿ ಮುಂಬೈ ರೈಲನ್ನು ಮುಂದೆ ಹೋಗದಂತೆ ತಡೆದಿದ್ದಾರೆ. ಬಳಿಕ ಹಳಿಯನ್ನು ಸರಿಪಡಿಸಲಾಗಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು