Breaking News : ರಾಮಕುಂಜದ ಯುವತಿ ನಾಪತ್ತೆ ಪ್ರಕರಣ ; ಪ್ರಕಾಶ್ ದೇವಾಡಿಗ ತಂಡದಿಂದ ಕ್ಷಿಪ್ರ ಕಾರ್ಯಾಚರಣೆ – ಯುವತಿ ಪತ್ತೆ – ಕಹಳೆ ನ್ಯೂಸ್
ಕಡಬ :ಪೊಲೀಸ್ ಅಧಿಕಾರಿಗಳ ಕ್ಷಿಪ್ರ ಕಾರ್ಯಾಚರಣೆ ದಕ್ಷ ಪೊಲೀಸ್ ಅಧಿಕಾರಿಗಳಾದ ಡಾ. ರವಿಕಾಂತೇ ಗೌಡ ಪೊಲೀಸ್ ಅಧೀಕ್ಷಕರು ದಕ್ಷಿಣಕನ್ನಡ ಜಿಲ್ಲೆ, ಮಾನ್ಯ ಸಜಿತ್ ಕುಮಾರ್, ಮಾನ್ಯ ಪುತ್ತೂರು ಉಪವಿಭಾಗ ಉಪಾಧೀಕ್ಷಕರು,
ಮಾನ್ಯ ಪುತ್ತೂರು ಉಪವಿಭಾಗ ಉಪಾಧೀಕ್ಷಕರು ಶ್ರೀನಿವಾಸ ಪುತ್ತೂರು ಗ್ರಾಮಾಂತರ ವರ್ತನಿರೀಕ್ಷಕರು ನಾಗೇಶ್ ಕದ್ರಿ,ಇವರ ಮಾರ್ಗದರ್ಶನದಲ್ಲಿ ಪ್ರಕಾಶ್ ದೇವಾಡಿಗ ಹಾಗು ತಂಡದಿಂದ ಕ್ಷಿಪ್ರ ಕಾರ್ಯಾಚರಣೆ
ಸುಮಾರು ಐದು ದಿನಗಳ ಹಿಂದೆ ರಾಮಕುಂಜ ಶಾಲೆಗೆ ತೆರಳಿದ ಹತ್ತನೇ ತರಗತಿಯಾ ಹೆಣ್ಣು ಮಗಳು ಕಣೇ ಯಾಗಿದ್ದಾಳೆ ಎಂದು ಕಡಬ ಪೊಲೀಸ್ ಠಾಣೆಯಲ್ಲಿ ಅವಳ ಪೋಷಕರು ಪ್ರಕರಣ ದಾಖಲಿಸುತ್ತಾರೆ.
ಪ್ರಕರಣ ಭೇದಿಸಲು ಪ್ರಕಾಶ್ ದೇವಾಡಿಗರವರ ನೇತೃತ್ವದಲ್ಲಿ ಒಂದು ತಂಡ ರಚಿಸುತ್ತಾರೆ. ಈ ತಂಡ ರಾತ್ರಿ ಹಗಲು ಎನ್ನದೆ ಬೆಂಗಳೂರು, ಮೈಸೂರು, ಹಾಗು ಬೇರೆ ಬೇರೆ ಕಡೆಗಳಲ್ಲಿ ಐದು ದಿನಗಳಿಂದ ತನಿಖೆ ನಡೆಸುತ್ತಾರೆ.
ಕಡೆಗೆ ಹುಣಸೂರಿನಲ್ಲಿ ಹೆಣ್ಣು ಮಗಳನ್ನ ಪತ್ತೆಹಚ್ಚುವಲ್ಲಿ ಯೆಶಸ್ವಿ ಯಾಗಿದ್ದಾರೆ. ಪ್ರಕರಣ ಸುಕಾಂತ್ಯ ಕಂಡಿದೆ
ಇನೊಂದು ವಿಶೇಷ ಒಂದು ತಿಂಗಳಲ್ಲಿ ಇದು ಆರನೇ ಪ್ರಕರಣ ಆಗಿದೆ ಎಂದು ಮೂಲಗಳಿಂದ ಮಾಹಿತಿ ಇದೇ
ಈ ಎಲ್ಲ ನಾಪತ್ತೆ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಪ್ರಕಾಶ್ ದೇವಾಡಿಗ ಹಾಗು ಮೋನಪ್ಪ. ಎಸ್ ಹೆಡ್ ಕಾನ್ಸ್ಟೆಬಲ್, ಪ್ರಕಾಶ್ ಪೂಜಾರಿ ಪಿ. ಸಿ, ಚಂದ್ರಿಕಾ ಮಹಿಳಾ ಪೊಲೀಸ್, ಹಾಗು ಗ್ರಹರಕ್ಷಕ ದಳದ ಚೇತನ್, ಸಂದೇಶ, ತಂಡದವರನ್ನು ಕಡಬ ಜನತೆ ಈ ರೀತಿಯ ದಕ್ಷ ನಿಷ್ಠಾವಂತ ಪೊಲೀಸ್ ಅಧಿಕಾರಿಗಳು ಇನ್ನಷ್ಟು ಬರಲಿ ಎಂದು ಕೊಂಡಾಡುತಿದ್ದರೆ ಪ್ರಕಾಶ್ ದೇವಾಡಿಗ ಮತ್ತು ತಂಡದವರನ್ನು ಕಡಬ ತಾಲೂಕಿನ ಜನತೆ ಅಭಿನಂದಿಸುತ್ತಾರೆ.