Sunday, January 19, 2025
ಸುದ್ದಿ

ವೈಭವದಿಂದ ನಡೆದ ವಿಶ್ವ ಹವ್ಯಕ ಸಮ್ಮೇಳನದ ಸಮಾರೋಪ ಸಮಾರಂಭ– ಕಹಳೆ ನ್ಯೂಸ್

ಬೆಂಗಳೂರು: ಶ್ರೀ ಅಖಿಲ ಹವ್ಯಕ ಮಹಾಸಭಾದ ವತಿಯಿಂದ ದ್ವೀತಿಯ ಹವ್ಯಕ ಸಮ್ಮೇಳನದ ಸಮಾರೋಪ ಸಮಾರಂಭ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಿತು

.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ, ಸಮಾಜ ಪುರುಷ ಮೈಕೊಡವಿ ಎದ್ದು ನಿಂತಿರುವ ಈ ಸನ್ನಿವೇಷವೇ ವಿಶ್ವ ಹವ್ಯಕ ಸಮ್ಮೇಳನ, ಸಮುದ್ರೋಲ್ಲಂಘನ ಸಮಯದಲ್ಲಿ ಆಂಜನೇಯ ಮೈಕೊಡವಿ ಎದ್ದು ನಿಂತನಂತೆ, ಆಗ ಸಹಸ್ರಾರು ಜನ ಅವನನ್ನು ಆಶ್ಚರ್ಯ ಚಕಿತರಾಗಿ ನೋಡಿದರಂತೆ, ಹಾಗೆಯೇ ಹವ್ಯಕ ಸಮಾಜ ಮೈಕೊಡವಿ ಜಾಗೃತವಾಗಿ ನಿಂತಿದೆ. ಜಗತ್ತು ಇದನ್ನು ಗಮನಿಸಬೇಕು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಮ್ಮೇಳನದ ಅಧ್ಯಕ್ಷತೆಯನ್ನು ಡಾ. ಗಿರಿಧರ ಕಜೆ, ಗೌರವಾಧ್ಯಕ್ಷತೆಯನ್ನು ಶ್ರೀ ಭೀಮೇಶ್ವರ ಜೋಷಿ ವಹಿಸಿಕೊಂಡಿದ್ದರು. ಇದೇ ಸಮಯದಲ್ಲಿ ಸೇನಾಪಡೆಗಳಲ್ಲಿ ಸೇವೆಸಲ್ಲಿಸಿದ ಹಾಗೂ ಸಲ್ಲಿಸುತ್ತಿರುವ 75 ಧೀರಯೋಧರಿಗೆ “ಹವ್ಯಕ ಯೋಧರತ್ನ” ಪುರಸ್ಕಾರ ನೀಡಿ ಗೌರವಿಸಲಾಯಿತು. ಅಂತೆಯೇ 75 ಗೋದಾನ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಗೋವು ಹಸ್ತಾಂತರ ಮಾಡುವುದರ ಮೂಲಕ ಚಾಲನೆ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ರಾಜಕೀಯ ನಾಯಕರು ಪಾಲ್ಗೊಂಡಿದ್ದರು. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಕೇಂದ್ರ ಸಚಿವ ಸದಾನಂದ ಗೌಡ, ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಶೃಂಗೇರಿ ಮಠದ ಶ್ರೀ ವಿದ್ಯಾಭಿನವ ವಿದ್ಯಾರಣ್ಯಭಾರತೀ ಸ್ವಾಮಿ, ರಾಮಕೃಷ್ಣಾಶ್ರಮದ ಪೂಜ್ಯ ಶ್ರೀಚಂದ್ರಶೇಖರಾನಂದಜಿ, ನ್ಯಾಯಮೂರ್ತಿ ಶೈಲೇಂದ್ರ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲ್, ಬಿ ವೈ ರಾಘವೇಂದ್ರ, ಶಾಸಕರಾದ ರವಿಸುಬ್ರಹ್ಮಣ್ಯ, ಅಶ್ವತ್ಥನಾರಾಯಣ್, ಆರತಿ ಕೌಂಡಿನ್ಯ ಮತ್ತಿತ್ತರರು ಉಪಸ್ಥಿತರಿದ್ದರು.