Recent Posts

Sunday, January 19, 2025
ಸುದ್ದಿ

ಈಜುಕೊಳಕ್ಕೆ ಇಳಿದ ಬಾಲಕ ಅಪಾಯದಿಂದ ಪಾರು – ಕಹಳೆ ನ್ಯೂಸ್

ಪುತ್ತೂರು: ಕುಂಬ್ರ ಸಮೀಪದ ಪರ್ಲಡ್ಕ ಬಿಗೋಸ್ ರೆಸಾಟ್ 9ಗೆ ಮನೆಯವರ ಜತೆ ಬಂದಿದ್ದ ಬಾಲಕನೋರ್ವ ಅಲ್ಲಿನ ಈಜುಕೊಳಕ್ಕೆ ಇಳಿದು ಅಪಾಯಕ್ಕೆ ಸಿಲುಕಿದ್ದ ಘಟನೆ ನಾಲ್ಕು ದಿನಗಳ ಹಿಂದೆ ಸಂಭವಿಸಿದ್ದು ಅದರ ವಿಡಿಯೋ ತುಣಕು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಸ್ಥಳದಲ್ಲಿದ್ದವರು ಬಾಲಕನನ್ನು ರಕ್ಷಿಸುವಲ್ಲಿ ಸಫಲರಾಗಿದ್ದರು.
ಡಿ. 26ರಂದು ಮಧ್ಯಾಹ್ನ ಪುತ್ತೂರಿನ ಸಾರದ ಕುಟುಂಬವೊಂದರ ಕಾರ್ಯಕ್ರಮ ಈ ರೆಸಾರ್ಟ್‍ನಲ್ಲಿ ಜರಗಿತ್ತು. ಪಾರ್ಟಿಯಲ್ಲಿ ಭಾಗವಹಿಸಿದ್ದ ಹಲವರು ತೆರಳಿದ್ದ ಬಳಿಕ ಸಂಜೆ ನಾಲ್ಕು ಗಂಟೆ ಸುಮಾರಿಗೆ ಪೋಷಕರ ಜತೆಗಿದ 5 ಮಂದಿ ಬಾಲಕರು ಈಜು ಕೊಳಕ್ಕೆ ಇಳಿದಿದ್ದರು. ಇದನ್ನು ನೋಡಿದ 8ರ ಹರೆಯದ ಬಾಲಕನೋರ್ವ ಸೀದಾ ಕೊಳಕ್ಕೆ ಇಳಿದಿದ್ದಾನೆ. ಆತ ಇಳಿದಿದ್ದ ವಿಷಯ ಪೋಷಕರ ಗಮನಕ್ಕೆ ಬಂದಿರಲಿಲ್ಲ ಬಳಿಕ ಮೂರು ಬಾರಿ ಮುಳುಗಿ ಮೇಲೇಳುತ್ತಿದ್ದ ಬಾಲಕ ತನ ಕೈಗಳನ್ನು ಮೇಲಕ್ಕೆತ್ತಿ ಸಹಾಯ ಯಾಚಿಸುವುದನ್ನು ಆತನ ತಾಯಿ ಗಮನಿಸಿ ಬೊಬ್ಬೆ ಹಾಕಿದ್ದಾರೆ. ಕೂಡಲೇ ಸಂಬಂಧಿಯೋರ್ವ ನೀರಿಗೆ ಧುಮುಕಿ ಬಾಲಕನನ್ನು ಮೇಲಕ್ಕೆತ್ತಿದ್ದಾರೆ. ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಜಾಹೀರಾತು

ಜಾಹೀರಾತು
ಜಾಹೀರಾತು