Sunday, January 19, 2025
ಸುದ್ದಿ

ಗಾಂಜಾ ಸೇವನೆ ಪತ್ತೆ; ಓರ್ವನ ಬಂಧನ – ಕಹಳೆ ನ್ಯೂಸ್

ಮಂಗಳೂರು: ಇತ್ತೀಚಿನ ದಿನಗಳಲ್ಲಿ ಗಾಂಜಾ ಸೇವನೆಯ ದುಶ್ಚಟ ಯುವಕರಲ್ಲಿ ಹೆಚ್ಚಾಗುತ್ತಿದೆ. ಬಜಪೆ ಠಾಣಾ ಸರಹದ್ದಿನ ಮಂಗಳೂರು ತಾಲೂಕು ಕೆಲಿಂಜಾರು ಗ್ರಾಮದ ಕುಪ್ಪೆಪದವಿನಲ್ಲಿ 25 ವರ್ಷದ ತಂಜಿಲ್ ಎಂಬಾತ ಗಾಂಜಾ ಸೇವನೆ ಮಾಡಿರುವುದಾಗಿ ತಿಳಿದು ಬಂದಿದ್ದು ಪೋಲಿಸರ ಅತಿಥಿಯಾಗಿದ್ದಾನೆ.

ಈತ ಕುಪ್ಪೆಪದವು ನಿವಾಸಿಯಾಗಿದ್ದು, ಗಾಂಜಾ ಸೇವನೆ ಮಾಹಿತಿ ಮೇರೆಗೆ ಬಜಪೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಶ್ರೀ ಎಸ್ ಪರಶಿವಮೂರ್ತಿ ಮತ್ತು ತಂಡ ದಾಳಿ ಮಾಡಿ ಪ್ರಕರಣ ಪತ್ತೆ ಹಚ್ಚಿ ಸದ್ರಿ ಗಾಂಜಾ ಸೇವನೆ ಮಾಡುತ್ತಿದ್ದ ತಂಜಿಲ್ ಎಂಬುವವನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಿಕೊಂಡು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು