Recent Posts

Sunday, January 19, 2025
ಸುದ್ದಿ

ಆಟೋ ರಿಕ್ಷಕ್ಕೆ ಬೈಕ್ ಡಿಕ್ಕಿ; ಸವಾರ ಸಾವು – ಕಹಳೆ ನ್ಯೂಸ್

ಸುಳ್ಯ: ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಯುವಕ ಮೃತಪಟ್ಟ ಘಟನೆ ಅಮರ ಪಡ್ನೂರು ಗ್ರಾಮದ ಚೊಕ್ಕಾಡಿಯಲ್ಲಿ ನಡೆದಿದೆ. ರಾತ್ರಿ ಸುಮಾರು 11.30ರ ಹೊತ್ತಿಗೆ ಬೈಕ್‍ನಲ್ಲಿ ಚೊಕ್ಕಾಡಿ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ವೀಕ್ಷಿಸಿ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಎದುರುಗಡೆಯಿಂದ ಬರುತ್ತಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದರ ಪರಿಣಾಮವಾಗಿ ಬೈಕ್ ಸವಾರ ರಸ್ತೆ ಬದಿಯ ಚರಂಡಿಗೆ ಎಸೆಯಲ್ಪಟ್ಟಿದ್ದು, ತಲೆಗೆ ಗಂಬೀರ ಗಾಯವಾಗಿತ್ತು. ತಕ್ಷಣ ಅಟೋ ರಿಕ್ಷಾ ಚಾಲಕ ಕುಸುಮಾಧರ ಬೊಳ್ಳಾಜೆ ಮತ್ತು ಗಂಗಾಧರ ಬೊಳ್ಳಾಜೆ ಹಾಗೂ ಸ್ಥಳೀಯರು ಸೇರಿ ಸುಳ್ಯದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರನ್ನ ಸಾಯಿ ಪ್ರಸಾದ್ ಎಂದು ಗುರುತಿಸಲಾಗಿದ್ದು, ಇವರು ಪುತ್ತೂರು ಮಹಾಲಿಂಗೇಶ್ವರ ಐ.ಟಿ.ಐ.ವಿದ್ಯಾರ್ಥಿಯಾಗಿದ್ದಾರೆ. ಮೃತರು ತಂದೆ ಕೂಸಪ್ಪ ಗೌಡ, ತಾಯಿ ಸುಂದರಿ, ಸಹೋದರಿಯರಾದ ಭವ್ಯ, ದೀಕ್ಷಿತಾ, ಪ್ರೇಮ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು