
ಪುತ್ತೂರು: ಧರ್ಮ ಶಿಕ್ಷಣ, ಜಾಗೃತಿ, ಮತ್ತು ಹಿಂದು ಸಂಘಟನೆ, ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ರಾಷ್ಟ್ರೀಯ ಹಿಂದೂ ಅಂದೋಲನ ಪುತ್ತೂರಿನ ಅಮರ್ ಜಾವನ್ ಸ್ಮಾರಕದ ಬಳಿ ನಡೆಯಿತು. ಈ ವೇಳೆ ಹಿಂದೂ ವಾದಿ ಮನ್ಮಥ ಶೆಟ್ಟಿ ಮಾತನಾಡಿ ಅಯ್ಯಪ್ಪ ಭಕ್ತರ ಮೇಲೆ ಹಾಕಿರುವ ಸುಳ್ಳು ಕೇಸು ದಾಖಲಾತಿಯನ್ನು ತೆಗೆಯಬೇಕು. ಮೈಸೂರಿನ ಸರಣಿ ಹತ್ಯೆಯ ಆರೋಪಿ ಪಾಷನಿಗೆ ನೀಡಿರುವ ಜಾಮೀನನ್ನು ರದ್ದುಗೊಳಿಸಬೇಕು ಮತ್ತು ಅವನನ್ನು ಬಂಧಿಸಿ ಕಾನೂನುಕ್ರಮ ಕೈಗೊಳ್ಳಬೇಕು. ದತ್ತ ಪೀಠದಲ್ಲಿ ಹಿಂದೂ ಪುರೋಹಿತರನ್ನು ನೇಮಕ ಮಾಡಬೇಕು ಎಂದರು.ಬಳಿಕ ಮಾತನಾಡಿದ ಹಿಂದೂವಾದಿ ಜರ್ನಾಧನ ಗೌಡ ಗೌರಿ ಹತ್ಯೆ ಪ್ರಕರಣದಲ್ಲಿ 18 ಕಾರ್ಯರ್ತರನ್ನು ಬಂಧಿಸಿದಿರಿ. ಅವರು ಒಂದು ಗ್ರಂಥವನ್ನು ಓದಿ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿರುವುದಾಗಿ ಆಸ್ಯಸ್ಪದ ಕಾರಣ ನೀಡಿದ್ದಿರಾ? ದೇಶದಲ್ಲಿ ಜಿಹಾದಿಗಳು ಅಲ್ಲಲ್ಲಿ ಬಾಂಬ್ ಸ್ಪೋಟ ಮಾಡುತ್ತಿದ್ದಾರೆ ಅವರು ಯಾವ ಗ್ರಂಥವನ್ನು ಓದಿ ಈ ಕೃತ್ಯವೆಸಗಿದ್ದಾರೆ ಹೇಳಿ ಸ್ವಾಮಿ ಎಂದು ತನಿಖಾ ತಂಡಕ್ಕೆ ಪ್ರಶ್ನಿಸಿದ್ದಾರೆ.