ಕೈರಂಗಳದ ಶಾರದ ಗಣಪತಿ ವಿದ್ಯಾಕೇಂದ್ರದಲ್ಲಿ ಕೃಷಿ ಉತ್ಸವ ಯಶಸ್ವಿಯಾಗಿ ನಡೆದಿದೆ. ಡಿಸೆಂಬರ್ 29, 30 ರಂದು ಕಾರ್ಯಕ್ರಮ ನಡೆದಿದ್ದು ಸಾಕಷ್ಟು ಕೃಷಿ ಚಟುವಟಿಕೆಗಳ ಕೇಂದ್ರದಂತೆ ಮಾರ್ಪಡುಗೊಂಡಿತ್ತು. ಶಾರದಾ ಗಣಪತಿ ವಿದ್ಯಾಕೇಂದ್ರ ದ. ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮುಡಿಪು ವಲಯ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆ ಗೊಂಡಿತ್ತು
.
ಈ ಕೃಷಿ ಉತ್ಸವ ಬಹಳ ವೈವಿಧ್ಯದಿಂದ ನಡೆದಿದ್ದು ವಸ್ತು ಪ್ರದರ್ಶನ, ಸಿರಿ ಉತ್ಪನ್ನ ಮಳಿಗೆ, ತರಕಾರಿ ಬೀಜಗಳು, ಕೃಷಿಯಂತ್ರಗಳ ಪ್ರದರ್ಶನ ಮತ್ತು ಮಾರಾಟ, ಬೋನ್ಸಾಯ್ ಗಿಡಗಳು, ಹೀಗೆ ಹಲವಾರು ಮಳಿಗೆಗಳು ಗಮನಸೆಳೆದವು. ಅಂತೆಯೇ ಈ ಉತ್ಸವದಲ್ಲಿ ಹಲವಾರು ವಿಚಾರ ಸಂಕಿರಣಗಳು, ಆದರ್ಶ ಕೃಷಿಕರ ಸಮಾವೇಶ ನಡೆದಿದ್ದು ಮಾತ್ರವಲ್ಲದೆ ವಿಠ್ಠಲ ನಾಯಕ್‍ರಿಂದ ಗೀತಾ ಸಾಹಿತ್ಯ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ನೆರವೇರಿತು. ಹಾಗೇ ಕೃಷಿಕರು ಮಾಡಿದ ಕೃಷಿ ಉತ್ಪನ್ನಗಳ ಸ್ಪರ್ಧೆಯನ್ನು ಆಯೋಜನೆ ಮಾಡ್‍ಲಾಗಿತ್ತು. ಒಟ್ಟಾರೆ ಈ ಗ್ರಾಮಿಣ ಕೃಷಿ ಉತ್ಸವವು ಸಾವಿರಾರು ಮಂದಿಯನ್ನು ತನ್ನತ್ತ ಸೆಳೆದಿರೊದೇ ಈ ಕಾರ್ಯಕ್ರಮಕ್ಕೆ ಸಿಕ್ಕ ಯಶಸ್ವಿಯಾಗಿದೆ.