Recent Posts

Sunday, January 19, 2025
ಸುದ್ದಿ

ಮದುವೆ ಕಾರ್ಯಕ್ರಮದಲ್ಲಿ ಪರಿಸರ ಕಾಳಜಿ ಮೆರೆದ ದಂಪತಿಗಳು – ಕಹಳೆ ನ್ಯೂಸ್

ಮಂಗಳೂರು: ಮದುವೆ ಕಾರ್ಯಕ್ರಮದಲ್ಲಿ ಸ್ವತಃ ವಧು ವರರೇ ಗಿಡಗಳನ್ನ ವಿತರಿಸಿ ಪರಿಸರ ಕಾಳಜಿ ಮೆರೆದ ಅಪರೂಪದ ಘಟನೆ ಮಂಗಳೂರಿನಲ್ಲಿ ನಡೆಯಿತು. ಮಂಗಳೂರಿನ ಸೋಮೇಶ್ವರ ಪದವಿನಂಗಡಿಯ ಪ್ರವೀಣ್ ಮತ್ತು ಹೇಮಲತಾ ಮದುವೆಯಾದ ದಂಪತಿ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಪ್ಪಟ ಅಭಿಮಾನಿಯಾದ ಪ್ರವೀಣ್ ದಂಪತಿ ‘ಗಿಡ ಬೆಳೆಸಿ, ಮರ ರಕ್ಷಿಸಿ’ ಎಂಬ ಉದ್ದೇಶವನ್ನು ಇಟ್ಕೊಂಡು ತಮ್ಮ ಮದುವೆ ದಿನದಂದೇ ಮರ ವಿತರಿಸುವ ಮಾದರಿ ಕಾರ್ಯ ಮಾಡಿ ಗಮನ ಸೆಳೆದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮದುವೆಗೆ ಬಂದ ಒಂದು ಸಾವಿರಕ್ಕೂ ಹೆಚ್ಚು ಮಂದಿಗೆ ಗಿಡಗಳನ್ನ ವಿತರಿಸಲಾಯಿತು. ಶಾಸಕ ವೇದವ್ಯಾಸ ಕಾಮತ್ ಸೇರಿ ಅನೇಕ ಗಣ್ಯರು ಮದುವೆಗೆ ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.