Recent Posts

Sunday, January 19, 2025
ಸುದ್ದಿ

ಶಾರ್ಟ್ ಸರ್ಕ್ಯೂಟ್‌: ಪೂಜಾ ಸಾಮಾಗ್ರಿಯ ಅಂಗಡಿ ಬೆಂಕಿಗಾಹುತಿ – ಕಹಳೆ ನ್ಯೂಸ್

ಪೂಜಾ ಸಾಮಾಗ್ರಿಯ ಅಂಗಡಿಯೊಂದು ಬೆಂಕಿಗಾಹುತಿಯಾಗಿ ಲಕ್ಷಾಂತಗರ ರೂ. ನಷ್ಟವಾದ ಘಟನೆ ಕುಮಟಾ ತಾಲೂಕಿನ ಗೋಕರ್ಣದ ಮೇಲಿನಕೇರಿಯಲ್ಲಿ ಸೋಮವಾರ ನಡೆದಿದೆ.

ಕುಮಟಾದ ಮೇಲಿನಕೇರಿಯ ಪುರುಷೋತ್ತಮ ಪೈ ಎನ್ನುವವರಿಗೆ ಸೇರಿದ ಅಂಗಡಿ ಇದಾಗಿದ್ದು ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಅಂಗಡಿಯಲ್ಲಿದ್ದ ಪಟಾಕಿಗೆ ಬೆಂಕಿ ತಗುಲಿ ಬಳಿಕ ಅದು ಸಿಲಿಂಡರ್‌ಗೆ ವ್ಯಾಪಿಸಿದ ಪರಿಣಾಮ ಅಂಗಡಿ ಸುಟ್ಟುಭಸ್ಮವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೂವು, ಹಣ್ಣು ಪೂಜಾ ಸಾಮಗ್ರಿ ಸೇರಿ ೧೦ ಲಕ್ಷಕ್ಕೂ ಅಧಿಕ ಹಾನಿ ಸಂಭವಿಸಿದ್ದು ಸ್ಥಳೀಯರು, ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು