ಪುತ್ತೂರು: ಕೀಟನಾಶಕ ಸೇವಿಸಿ ಮಹಿಳೆ ಮೃತಪಟ್ಟ ಘಟನೆ ಹಿರೆಬಂಡಾಡಿ ಗ್ರಾಮದ ಅಣಾವು ಗುರಿ ಎಂಬಲ್ಲಿ ನಡೆದಿದೆ. ಕೆಲವು ವರ್ಷಗಳ ಹಿಂದೆ ಅಣಾವು ಗುರಿ. ಪ್ರಸಾದ್ ಎಂಬವರೊಂದಿಗೆ ದಿವ್ಯಾ ಅವರ ವಿವಾಹವಾಗಿದ್ದು, ದಂಪತಿಗಳು ಅನ್ನೊನ್ಯವಾಗಿಯೋ ಇದ್ದರು.
ವಿವಾಹದ ಮುಂಚೆ ದಿವ್ಯಾ ಪುತ್ತೂರು ರಾಧಾಸ್ ಟೆಕ್ಸ್ಟೈಲ್ಸ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು, ಹೀಗಾಗಿ ವಿವಾಹವಾದ ಬಳಿಕವು ಈ ಕೆಲಸವನ್ನು ಮುಂದುವರಿಸಿದ್ದರು.
ವಾರದ ಹಿಂದೆ ದಿವ್ಯಾ ತನ್ನ ತವರು ಮನೆಗೆ ಬಂದಿದ್ದರು, ಇನ್ನು ಡಿಸೆಂಬರ್ 31 ರಂದು ದಿವ್ಯ ಅಕ್ಕನ ಗಂಡ ಸುರೇಶ್ ಜೊತೆಗೆ ತನ್ನ ಗಂಡನ ಮನೆಗೆ ಅಗಮಿಸಿದ್ದು, ಅದೇ ದಿನ ರಾತ್ರಿ ಗಂಡನ ಮನೆಯಲ್ಲಿ ಯಾವುದೋ ಕೀಟನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದರು.
ಕೂಡಲೆ ಅವರನ್ನು ಪುತ್ತೂರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ.
ದಿವ್ಯಾ ಅವರ ತಾಯಿ ಪುತ್ರಿ ಮರಣದ ಕುರಿತಾಗಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಉಪ್ಪಿನಂಗಡಿ ಪೋಲಿಸರಿಗೆ ಮನವಿ ಮಾಡಿದ್ದಾರೆ. ಮೃತರು ಪತಿ ಪ್ರಸಾದ್, ತಾಯಿ ಭಾರತಿ, ಸಹೋದರಿ ಭವ್ಯ ಅವರನ್ನು ಅಗಲಿದ್ದಾರೆ.