Monday, November 25, 2024
ಸುದ್ದಿ

ಹೊಸ ವರ್ಷ ಆರಂಭದಲ್ಲೇ ಬೆಂಗಳೂರಿನಲ್ಲಿ ವಿಪರೀತ ಚಳಿ – ಕಹಳೆ ನ್ಯೂಸ್

ಬೆಂಗಳೂರು: ಬೆಳಗ್ಗೆ ಎದ್ದ ತಕ್ಷಣ ಎಲ್ಲರ ಬಾಯಲ್ಲಿ ಕೇಳೋ ಮಾತು ಅಂದ್ರೆ “ಅಯ್ಯೋ ಚಳಿ ಚಳಿ”, ಹೌದು ಹೊಸ ವರ್ಷ ಆರಂಭದಲ್ಲಿ ಚಳಿಯ ಪ್ರಮಾಣ ವಿಪರೀತವಾಗಿದೆ.

ಕಳೆದೆರಡು ದಿನಗಳಿಂದಲೂ ರಾಜ್ಯದ ಕನಿಷ್ಠ ತಾಪಮಾನದಲ್ಲಿ ಗಣನೀಯವಾಗಿ ಇಳಿಕೆಯಾಗಿದ್ದು, ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದ ಚಳಿ ಕಂಡುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೋಡ ಕವಿದ ವಾತಾವರಣ ಇಲ್ಲದಿರುವುದರಿಂದ ಚಳಿಯ ಪ್ರಮಾಣ ಹೆಚ್ಚಾಗಿದ್ದು, ಸಂಕ್ರಾಂತಿಯವರೆಗೂ ಎರಡು ವಾರಗಳ ಕಾಲ ಇದೇ ರೀತಿಯ ಚಳಿ ಮುಂದುವರೆಯಲಿದೆ. ಕನಿಷ್ಠ ತಾಪಮಾನದಲ್ಲೂ ಒಂದೆರಡು ಡಿಗ್ರಿ ಸೆಲ್ಸಿಯಸ್‌ನಷ್ಟು ವ್ಯತ್ಯಾಸ ಕಂಡುಬರಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸದ್ಯಕ್ಕೆ ವಾತಾವರಣದಲ್ಲಿ ಮಳೆ ಅಥವಾ ಮೋಡ ಆವರಿಸುವಂತಹ ಪರಿಸ್ಥಿತಿ ಇಲ್ಲ. ಹೀಗಾಗಿ ಹಗಲು ವೇಳೆ ಬಿಸಿಲು ಹಾಗೂ ರಾತ್ರಿ ವೇಳೆ ಚಳಿಯ ಪ್ರಮಾಣ ಹೆಚ್ಚಾಗಿರಲಿದೆ. ಮೋಡ ಕವಿದ ವಾತಾವರಣವಿದ್ದಾಗ ಉಷ್ಣಾಂಶವನ್ನು ಹಿಡಿದಿಡುತ್ತದೆ. ಆಗ ಕನಿಷ್ಠ ತಾಪಮಾನದಲ್ಲಿ ಏರಿಕೆ ಕಂಡುಬಂದು ಚಳಿಯ ಪ್ರಮಾಣ ಕಡಿಮೆ ಇರುತ್ತದೆ.