ಕಾರವಾರ ತಾಲೂಕಿನ ದೇವಭಾಗದ ಕಾಳಿ ನದಿ ದಂಡೆಯಲ್ಲಿ ಸುಮಾರು ೨೫ ರಿಂದ ೩೦ ವರ್ಷ ವಯಸ್ಸಿನ ಅಪರಿಚಿತ ಮಹಿಳೆಯೋರ್ವಳ ಶವ ಪತ್ತೆಯಾಗಿದೆ.
ಕಪ್ಪು ಪ್ಯಾಂಟ್ ಹಾಗೂ ಬೂದು ಬಣ್ಣದ ಬಟ್ಟೆ ಧರಿಸಿದ್ದು, ಈಕೆ ೩ ದಿನಗಳ ಹಿಂದೆಯೇ ಸಾವನ್ನಪ್ಪಿರುವ ಸಾಧ್ಯತೆ ಇದೆ. ಶವ ಕೊಳೆತಿದ್ದು ಗುರುತು ಪತ್ತೆಯಾಗದ ಸ್ಥಿತಿಯಲ್ಲಿದೆ. ಈ ಕುರಿತು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.