Sunday, November 24, 2024
ಸುದ್ದಿ

ಪೋಲಿಸರಿಂದ ವಿನೂತನ ರೀತಿಯಲ್ಲಿ ಹೊಸವರ್ಷ ಆಚರಣೆ – ಕಹಳೆ ನ್ಯೂಸ್

ಮೈಸೂರು: ದೇಶದಾದ್ಯಂತ ಹೊಸ ವರ್ಷವನ್ನ ಅದ್ದೂರಿಯಾಗಿ ಆಚಸಲಾಗಿದೆ, ಆದ್ರೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹೊಸ ವರ್ಷವನ್ನು ಜನತೆ ವಿಶೇಷವಾಗಿ ಬರಮಾಡಿಕೊಂಡರೆ, ಅದ್ರಲ್ಲೂ ಪೊಲೀಸರು ವಿನೂತನವಾಗಿ ಆಚರಿಸಿದರು.

ಸಂಚಾರ ನಿಯಮವನ್ನು ಸರಿಯಾಗಿ ಪಾಲಿಸುವ ಸಾರ್ವಜನಿಕರಿಗೆ ಮೈಸೂರು ಪೊಲೀಸರು ಗ್ರೀಟಿಂಗ್ ಕಾರ್ಡ್, ನೆನಪಿನ ಕಾಣಿಕೆ, ರೋಸ್ ನೀಡಿ ಲಡ್ಡು ಕೊಟ್ಟು ಇದೇ ಮೊದಲ ಬಾರಿಗೆ ಹೊಸ ವರ್ಷವನ್ನು ವಿಶೇಷವಾಗಿ ಆಚರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಗರದ ಪ್ರಮುಖ ರಸ್ತೆಗಳು ಮತ್ತು ವೃತ್ತಗಳಲ್ಲಿ ಪೊಲೀಸರು ನಿಂತು ನಿಯಮ ಪಾಲಿಸುವ ವಾಹನ ಸವಾರರನ್ನು ನಿಲ್ಲಿಸಿ ಅವರುಗಳಿಗೆ ಶುಭಾಶಯ ಕೋರಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಂತರ ಶುಭಾಶಯ ಪತ್ರ, ನೆನಪಿನ ಕಾಣಿಕೆ, ಲಡ್ಡು ಹಾಗೂ ರೋಸ್ ಶುಭ ಹಾರೈಸಿದುದು ವಿಶೇಷವಾಗಿತ್ತು. ಪ್ರತಿ ದಿನ ಸಂಚಾರ ನಿಯಮ ಉಲ್ಲಂಘಿಸದೆ ವಾಹನ ಚಲಾಸುವಂತೆ ಜನರಿಗೆ ತಿಳುವಳಿಕೆ ನೀಡಿದರು.

ಅಷ್ಟೇ ಅಲ್ಲ ಹೆಲ್ಮೆಟ್ ಧರಿಸಬೇಕು ಎಂದು ಸಲಹೆ ನೀಡಿದರು.ಸಂಚಾರ ನಿಯಮ ಪಾಲನೆ ಮಾಡುವುದರಿಂದ ನಿಮಗೆ, ನಿಮ್ಮ ಕುಟುಂಬದವರಿಗೆ ಮತ್ತು ಇತರರಿಗೂ ಯಾವುದೇ ತೊಂದರೆಯಾಗುವುದಿಲ್ಲ ಎಂದು ಮನದಟ್ಟು ಮಾಡಿದರು.