Sunday, November 24, 2024
ಸುದ್ದಿ

ಸಹಕಾರ ನೀಡಿ ಬದುಕುವುದು ನಿಜವಾದ ಜೀವನ: ಹರಿಣಿ ಪುತ್ತೂರಾಯ – ಕಹಳೆ ನ್ಯೂಸ್

ಪುತ್ತೂರು: ನಾವು ಮಾಡುವ ಕೆಲಸದಲ್ಲಿನ ಶ್ರದ್ಧೆಯನ್ನು ಮಾತಿನ ಮೂಲಕ ಹೊರಹಾಕುತ್ತಿರಬೇಕು. ದೇವರನ್ನು ಕೆಲಸದ ಮೂಲಕ ಕಾಣಬಹುದು. ಶೈಕ್ಷಣಿಕ ವಿಚಾರಗಳನ್ನು ತರಗತಿಯಲ್ಲಿ ಕಲಿತರೆ ಹೊರಗಿನ ವಿಚಾರಗಳನ್ನು ಎನ್‌ಎಸ್‌ಎಸ್‌ನಂತಹ ಶಿಬಿರಗಳಿಂದ ಪಡೆಯಬಹುದು ಎಂದು ನರೇಂದ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಹರಿಣಿ ಪುತ್ತೂರಾಯ ಹೇಳಿದರು.

ಅವರು ವಿವೇಕಾನಂದ ಪದವಿ ಕಾಲೇಜಿನ ಐಕ್ಯುಎಸಿ ಮತ್ತು ಎನ್‌ಎಸ್‌ಎಸ್ ಘಟಕದ ಸಂಯುಕ್ತಾಶ್ರಯದಲ್ಲಿ ಸಾರಡ್ಕ ಸಮೀಪದ ಮೂಡಂಬೈಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಶುಕ್ರವಾರ ಮಾತನಾಡಿದರು.
ಶಿಕ್ಷಣದ ಜತೆಗೆ ಜೀವನದ ಮೌಲ್ಯಗಳನ್ನು ಕೂಡ ಕಲಿಯಬೆಕು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಾಳಿ ಬದುಕಲು ಬೇಕಾದ ಶ್ರದ್ಧೆ, ಪ್ರಾಮಾಣಿಕತೆ, ಪರಿಶ್ರಮವನ್ನು ಶಿಬಿರದ ಮೂಲಕ ಕಲಿಯಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ವೈಚಾರಿಕವಾಗಿ, ಬೌದ್ಧಿಕವಾಗಿ ಹಾಗೂ ಮಾನಸಿಕವಾಗಿ ಬೆಳೆಯಬೇಕು. ಇಂದು ಹಣದ ಆಸೆಗಾಗಿ ವಿದೇಶಕ್ಕೆ ಹೋಗಿ ಬದುಕುವವರ ಸಂಖ್ಯೆ ಹೆಚ್ಚಾಗುತ್ತಿದೆ. ವ್ಯಾವಹಾರಿಕ ಸಂಬಂಧಗಳು ಹೆಚ್ಚಾಗುತ್ತಿರುವುದು ದುರಂತ. ಮನುಷ್ಯನು ಅತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿವೇಕಾನಂದ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಮನಮೋಹನ ಎಂ ಮಾತನಾಡಿ ಗಾಂಧೀಜಿಯ ನೆನಪಿಲ್ಲಿ ಅವರ ಆದರ್ಶಗಳನ್ನು ಆಳವಡಿಸಲು ಹಳ್ಳಿಯ ಬದುಕನ್ನು ಅರಿಸಬೇಕು. ಹಳ್ಳಿಗಳು ನಗರಗಳಾಗುತ್ತಿರುವುದು ದುರಂತ. ಪ್ರಪಂಚವೇ ಗೌರವ ಕೊಟ್ಟ ವ್ಯಕ್ತಿ ಎಂದರೆ ಅದು ಗಾಂಧಿ. ಇಂದು ಗಾಂಧೀಜಿಯವರ ಮಾನವೀಯತೆಯನ್ನು ಸಾರಬೇಕಾಗಿದೆ ಎಂದರು. ಮೂಡಂಬೈಲು ಶಾಲೆಯ ಮುಖ್ಯೋಪಾದ್ಯಾಯ ಅರವಿಂದ ಕುಡ್ಲ ಮತನಾಡಿ ಶಿಬಿರವು ಬದುಕಿನ ಶಿಕ್ಷಣದ ಅನುಭವವನ್ನು ತಿಳಿಸಿಕೊಟ್ಟಿದೆ. ಸುತ್ತಲಿನ ಪರಿಸರವನ್ನು ಒಟ್ಟು ಮಾಡುವಲ್ಲಿ ಶಿಬಿರ ಯಶಸ್ವಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿವೇಕಾನಂದ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಸಮಾಜಮುಖಿಯಾದ ಕೆಲಸ ಮಾಡಿದಾಗ ನಮ್ಮ ಕಣ್ಣೀರು ಒರೆಸಲು ಜನ ಬರುತ್ತಾರೆ. ಅದುವೇ ಜೀವನದಲ್ಲಿ ಗಳಿಸುವ ಒಟ್ಟು ಸಂಪತ್ತು. ಈ ಸಂಪತ್ತನ್ನು ಸ್ಪರ್ಶಿಸಲು ಸಾಧ್ಯವಿಲ್ಲ. ಅನುಭವಿಸಲು ಮಾತ್ರ ಸಾಧ್ಯ. ಪ್ರಪಂಚವನ್ನು ಬದಲಾಯಿಸಲು ಯಾರಿಂದಲೂ ಸಾಧ್ಯ ಇಲ್ಲ.

ಆದರೆ ಒಬ್ಬ ವ್ಯಕ್ತಿಯ ಜೀವನದ ಪ್ರಪಂಚವನ್ನು ಬದಲಾಯಿಸಲು ಸಾಧ್ಯ. ಕಲಿತಂತಹ ಪಾಠಗಳು ಬದುಕಿನ ದಾರಿಗೆ ದೀಪವಾಗಬೇಕು. ಅವಕಾಶ ಇಲ್ಲ ಎಂಬ ನಿರಾಶಾಭಾವನೆ ಇರಬಾರದು. ಆಶಾಭಾವನೆ ಧನಾತ್ಮಕ ರೀತಿಯಲ್ಲಿ ಚಿಂತಿಸಿದಾಗ ಒಳ್ಳೆಯ ರೀತಿಯಲ್ಲಿ ಬದುಕಲು ಸಾಧ್ಯ ಎಂದರು.

ಮೂಡಂಬೈಲು ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಆನಂದ ನಾಯ್ಕ.ಟಿ, ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಅನಿತಾ ಕಾಮತ್, ಘಟಕ ನಾಯಕರುಗಳಾದ ನವನೀತ್ ರೈ ಎಂ, ಕಾರ್ತಿಕ್ ಎಮ್.ಎಚ್, ಶ್ರುತಿ ಕೆ.ಎಸ್, ಶ್ರಾವ್ಯಾ ಪಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ತೇಜಸ್, ಸಾಗರ್ ಎಂ.ಪಿ, ವಿದ್ಯಾರ್ಥಿನಿಯರಾದ ಶೀತಲಾ, ತೇಜಸ್ವಿನೀ ಸುವರ್ಣ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಉಪನ್ಯಾಸಕ ಪುನೀತ್ ವರದಿ ವಾಚಿಸಿದರು. ವಿದ್ಯಾರ್ಥಿನಿಯರಾದ ಶೀತಲ, ಮಧುಶ್ರೀ, ಗೀತಾ ಪ್ರಾರ್ಥಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಶ್ರೀನಾಥ್ ಬಿ ಸ್ವಾಗತಿಸಿದರು. ಉಪನ್ಯಾಸಕ ಶಿವಪ್ರಸಾದ್ ಕೆ ವಂದಿಸಿದರು. ಉಪನ್ಯಾಸಕ ದೀಕ್ಷಿತ್ ಕೆ ಕಾರ್ಯಕ್ರಮ ನಿರೂಪಿಸಿದರು.