Sunday, November 24, 2024
ಸುದ್ದಿ

ವಿ.ಹಿಂ.ಪ. ಬಜರಂಗದಳದ ಗರುಡ ತೇಜ ರಿಕ್ಷಾ ಚಾಲಕ ಮಾಲಕರ ಘಟಕ ಉದ್ಘಾಟನೆ – ಕಹಳೆ ನ್ಯೂಸ್

ಪುತ್ತೂರು: ಈಶ್ವರಮಂಗಲದಲ್ಲಿ ನೂತನವಾಗಿ ಸ್ಥಾಪನೆಗೂಂಡ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಗರುಡ ತೇಜ ರಿಕ್ಷಾ ಚಾಲಕ ಮಾಲಕರ ಘಟಕವನ್ನು ಬಜರಂಗದಳದ ಪ್ರಾಂತ ಸಹ ಸಂಚಾಲಕ್ ಮುರಳಿ ಕೃಷ್ಣ ಹಸಂತ್ತಡ್ಕರವರು ಉದ್ಘಾಟನೆ ಮಾಡಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ವಿಶ್ವ ಹಿಂದೂ ಪರಿಷತ್ ನ ಪುತ್ತೂರು ಪ್ರಖಂಡ ಅಧ್ಯಕ್ಷರಾದ ಜನಾರ್ಧನ ಬೆಟ್ಟ ಇವರು ನೂತನ ಘಟಕದ ಜವಾಬ್ದಾರಿ ಯನ್ನು ಘೋಷಣೆ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವಿಶ್ವ ಹಿಂದೂ ಪರಿಷತ್ ನ ಪುತ್ತೂರು ಪ್ರಖಂಡ ಕಾರ್ಯದರ್ಶಿ ನವೀನ್ ಕುಲಾಲ್ ಪ್ರಸ್ತಾವಿಕವಾಗಿ ಮಾತಾನ್ನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂರ್ಣಾತ್ಮರಾಮ್ ರವರು ವಹಿಸಿದ್ದರು.

ವೇದಿಕೆಯಲ್ಲಿ ಬಜರಂಗದಳದ ಪುತ್ತೂರು ಪ್ರಖಂಡ ಸಂಚಾಲಕ್ ನೀತಿನ್ ನಿಡ್ಪಳ್ಳಿ, ಸ್ಥಳೀಯ ಜಿಜೆಪಿ ಗ್ರಾಮ ಸಮಿತಿ ಅಧ್ಯಕ್ಷರಾದ ರಾಜೇಂದ್ರ ಪ್ರಸಾದ್, ಹಿಂದೂ ಜಾಗರಣ ವೇದಿಕೆಯ ಸಹ ಸಂಚಾಲಕ್ ರಾಜೇಶ್ ಪಂಚೋಡಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಸಾದ್ ಆಳ್ವ, ಸ್ನೇಹ ಸಂಗಮ ಗೌರವಾಧ್ಯಕ್ಷರು ಹಾಗೂ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಅನೇಕ ಪ್ರಮುಖರು ಹಾಗೂ ಈಶ್ವರಮಂಗಲದ ಹಿಂದೂ ಬಾಂದವರು ಹಾಗೂ ರಿಕ್ಷಾ ಚಾಲಕ ಮಾಲಕರು ಉಪಸ್ಥಿತರಿದ್ದರು.

ಚರಣ್ ಕೆ ಸ್ವಾಗತಿಸಿ ವಿಶಾಕ್ ಸಸಿಹಿತ್ಲು ಕಾರ್ಯಕ್ರಮ ದ ನಿರ್ವಹಣೆ ಜೋತೆಗೆ ಧನ್ಯವಾದ ಸಮರ್ಪಿಸಿದರು.