Tuesday, January 21, 2025
ಸುದ್ದಿ

ಬೆಂಗಳೂರಿನಲ್ಲಿ ಹೆಚ್ಚಿದ ಶೀತಗಾಳಿ: ಬೇಕೆನಿಸಿದೆ ಎಳೆಬಿಸಿಲು – ಕಹಳೆ ನ್ಯೂಸ್

ಬೆಂಗಳೂರು: ಬೆಂಗಳೂರಿನಲ್ಲಿ ಶೀತಗಾಳಿ ವಿಪರೀತವಾಗಿ ಬೀಸುತ್ತಿದೆ, ಮನೆಯಿಂದ ಹೊರಗಡೆ ಬಾರದಂತಹ ವಾತಾವರಣ ನಿರ್ಮಾಣವಾಗುತ್ತಿದೆ. ಉತ್ತರ ಒಳನಾಡಿನಲ್ಲಿ ಶೀತಗಾಳಿ ಬೀಸುತ್ತಿರುವುದರಿಂದ ನಗರದಲ್ಲಿ ಚಳಿ ಜೋರಾಗಿದೆ. ಹೊಸ ವರ್ಷ ಆರಂಭದಲ್ಲೇ ಚಳಿ ಹೆಚ್ಚಿದೆ.

ನಗರದಲ್ಲಿ ಕೆಲವು ದಿನಗಳಿಂದ ತಾಪಮಾನದಲ್ಲಿ ಏರುಪೇರು ಉಂಟಾಗಿತ್ತು, ಒಮ್ಮೆ ಚಳಿಯಾದರೆ ಮರುದಿನ ಕನಿಷ್ಠ ತಾಪಮಾನ ಏರಿಕೆಯಾಗಿ ಸೆಕೆಯಾಗುತ್ತಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀನಗರ್ ನಲ್ಲಿ ೧೧ ವರ್ಷದಲ್ಲೇ ಕನಿಷ್ಠ ತಾಪಮಾನ -೬.೮ ಡಿಗ್ರಿ; ನೀರೆಲ್ಲ ಮಂಜು ಗಡ್ಡೆ

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳವಾರದಿಂದ ಚಳಿ ಆರಂಭವಾಗಿದೆ. ವಾಡಿಕೆಯಂತೆ ಡಿಸೆಂಬರ್‌ನಲ್ಲೇ ಚಳಿಯಾಗಬೇಕಿತ್ತು, ಈಗ ತಾಪಮಾನ ಇಳಿದು ಚಳಿ ಹೆಚ್ಚಾಗಿದೆ. ಎರಡು ದಿನಗಳ ಹಿಂದೆ ೧೬-೧೭ ಡಿಗ್ರಿ ಸೆಲ್ಸಿಯಸ್ ಇದ್ದ ಕನಿಷ್ಠ ಉಷ್ಣಾಂಶ ಇದೀಗ ೧೪-೧೨ಕ್ಕೆ ಇಳಿದಿದೆ.

ಮುಂಬರುವ ದಿನಗಳಲ್ಲಿ ಚಳಿ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ. ಹೀಗಾಗಿ ಜನರು ಚಳಿಯಿಂದ ರಕ್ಷಣೆ ಪಡೆಯುವುದು ಸೂಕ್ತ, ಸ್ವೆಟರ್, ಟೋಪಿ ಧರಿಸುವುದು ಒಳಿತು.

ಬೆಂಗಳೂರು ನಗರದಲ್ಲಿ ಗರಿಷ್ಠ ೨೮.೧ ಡಿಗ್ರಿ ಸೆಲ್ಸಿಯಸ್ ಕನಿಷ್ಠ ೧೪ ಡಿಗ್ರಿ, ಕೈಎಎಲ್‌ನಲ್ಲಿ ಗರಿಷ್ಠ ೨೬.೩ ಡಿಗ್ರಿ ಸೆಲ್ಸಿಯಸ್, ಕನಿಷ್ಠ ೧೨.೬ ಡಿಗ್ರಿ ಸೆಲ್ಸಿಯಸ್, ಎಚ್‌ಎಎಲ್‌ನಲ್ಲಿ ಗರಿಷ್ಠ ೨೭.೬ ಡಿಗ್ರಿ ಸೆಲ್ಸಿಯಸ್ ಕನಿಷ್ಠ ೧೩ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ಬೀದರ್‌ನಲ್ಲಿ ಜನವರಿ ೨ರಂದು ೬ ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಇದು ವಾಡಿಕೆಗಿಂತ ೯.೩ ಡಿಗ್ರಿ ಕಡಿಮೆ ಇದೆ. ೧೯೬೭ರ ಜ.೯ರಂದು ಜಿಲ್ಲೆಯಲ್ಲಿ ೬.೨ ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿತ್ತು. ವಿಜಯಪುರದಲ್ಲಿ ೮.೫, ಧಾರವಾಡದಲ್ಲಿ ೯.೮ , ಹಾವೇರಿಯಲ್ಲಿ ೧೦.೨, ಕಲಬುರಗಿಯಲ್ಲಿ ೧೦.೭, ಗದಗ, ಬೆಳಗಾವಿಯಲ್ಲಿ ೧೧.೮ ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.