Monday, January 20, 2025
ಸುದ್ದಿ

ಕೈ ವಿರುದ್ಧ ಪ್ರಧಾನಿ ಮೋದಿ ಗರಂ – ಕಹಳೆ ನ್ಯೂಸ್

ನವದೆಹಲಿ: ಕಟ್ಟಡ ನಿರ್ಮಾಣ ವಲಯಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನು ಜಿಎಸ್‌ಟಿ ತೆರಿಗೆ ೫ ಶ್ರೇಣಿ ಒಳಗೆ ತರುವ ಚಿಂತನೆ ಕೇಂದ್ರ ಸರ್ಕಾರದ ಮುಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.

ರಾಹುಲ್ ಗಾಂಧಿ ಅವರ, ‘ಗಬರ್ ಸಿಂಗ್ ಟ್ಯಾಕ್ಸ್’ ಕುರಿತು ಕೇಳಲಾದ ಪ್ರಶ್ನೆಗೆ ಮಾತನಾಡಿದ ಮೋದಿ, ‘ಕೆಲವರು ತಾವು ಯೋಚಿಸುವಂತೆ ತಮ್ಮದೇ ಯೋಚನೆಯಲ್ಲಿ ಮಾತನಾಡುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಿಎಸ್‌ಟಿ ಜಾರಿಗೂ ಮುನ್ನ ದೇಶದ ಎಲ್ಲ ರಾಜಕೀಯ ಪಕ್ಷಗಳ ಒಮ್ಮತವನ್ನು ತೆಗೆದುಕೊಂಡು ಜಾರಿ ಮಾಡಲಿಲ್ಲವೇ’ ಎಂದು ರಾಹಲ್‌ಗೆ ಪರೋಕ್ಷವಾಗಿ ಪ್ರಶ್ನಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ದೇಶದಲ್ಲಿ ತೆರಿಗೆ ಪಾವತಿ ಸರಳೀಕರಣಗೊಳಿಸುವ ದೃಷ್ಟಿಯಿಂದ ಏಕರೂಪದ ತೆರಿಗೆ ಪದ್ಧತಿ ಪರಿಚಯಿಸಲಾಗಿದೆ. ಕಟ್ಟಡ ನಿರ್ಮಾಣದಂತಹ ಸಾಮಗ್ರಿಗಳನ್ನು ಜಿಎಸ್‌ಟಿ ತೆರಿಗೆಯ ೫ ಶ್ರೇಣಿ ಒಳಗೆ ತರುವ ಚಿಂತನೆ ನಮ್ಮ ಮುಂದೆ ಎಂದು ಹೇಳಿದ್ದಾರೆ.

ಬಳಿಕ ಮುಂದುವರಿದು ಮಾತನಾಡಿದ ಅವರು, ‘ಪ್ರಣಬ್ ಮುಖರ್ಜಿ ಅವರು ಹಣಕಾಸು ಮಂತ್ರಿ ಆಗಿದ್ದಾಗ ಜಿಎಸ್‌ಟಿ ಜಾರಿಯ ಕುರಿತ ಪ್ರಕ್ರಿಯೆಗಳು ನಡೆಯುತ್ತಿದ್ದವು’ ಎಂದು ರಾಹಲ್ ಗಾಂಧಿಗೆ ತಿರುಗೇಟು ನೀಡಿದ್ದಾರೆ.