Sunday, November 24, 2024
ಸುದ್ದಿ

ನಷ್ಟದಲ್ಲಿ ಸಿಲುಕಿರುವ ವಿಮಾನಯಾನ ಸಂಸ್ಥೆಗಳಿಗೆ ಸಿಹಿ ಸುದ್ದಿ – ಕಹಳೆ ನ್ಯೂಸ್

ನಷ್ಟದಲ್ಲಿ ಸಿಲುಕಿರುವ ವಿಮಾನಯಾನ ಸಂಸ್ಥೆಗಳಿಗೆ ಸಿಹಿ ಸುದ್ದಿಯೊಂದು ಸಿದ್ದವಾಗಿದೆ, ಹೌದು ಪೆಟ್ರೋಲ್ ಮತ್ತು ಡೀಸೆಲ್‌ಗಿಂತ ಇದೀಗ ವಿಮಾನದ ಇಂಧನ ದರ ಅಗ್ಗವಾಗಿದೆ.

ಇದು ವಿಮಾನಯಾನ ಸಂಸ್ಥೆಗಳ ಖುಷಿಗೆ ಕಾರಣವಾಗಿದೆ. ಜೆಟ್ ಇಂಧನ ದರವನ್ನು ಮಂಗಳವಾರ ದಾಖಲೆಯ ಶೇ.೧೪.೭ ರಷ್ಟು ಕಡಿತ ಮಾಡುವ ಮೂಲಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಏವಿಯೇಷನ್ ಟರ್ಬೈನ್ ಫ್ಯುಯೆಲ್ ದರವನ್ನು ಏಕಾಏಕಿ ಶೇ. ೧೪.೭ ರಷ್ಟು ಅಂದರೆ, ೯೯೯೦ ರೂಪಾಯಿಯಷ್ಟು ಪ್ರತಿ ಕಿಲೋಲೀಟರ್ ಗೆ ಕಡಿಮೆ ಮಾಡಿದಂತಾಗಿದೆ. ಪ್ರತಿ ಕಿಲೋಲೀಟರ್ ಗೆ ಈ ಮೊದಲು ೫೮೦೬೦.೯೭ ರೂಪಾಯಿಯಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ತಿಂಗಳ ಕಡಿತದಲ್ಲಿ ಇದು ಎರಡನೆಯ ಅತಿದೊಡ್ಡ ಕಡಿತ ಎಂದು ಹೇಳಲಾಗಿದೆ. ಡಿಸೆಂಬರ್ ೧ ರಿಂದ ಶೇ. ೧೦.೯ ಅಥವಾ ೮,೩೨೭.೮೩ ರೂಪಾಯಿಯಷ್ಟು ಪ್ರತಿ ಕಿಲೋ ಲೀಟರ್‌ಗೆ ಕಡಿತಗೊಳಿಸಲಾಗಿತ್ತು. ಇದನ್ನ ಒಂದು ರೀತಿಯ ಬೂಸ್ಟ್ ಎಂದೇ ವಿಶ್ಲೇಷಿಸಲಾಗುತ್ತಿದ್ದು. ಈ ಹಿನ್ನೆಲೆಯಲ್ಲಿ ಇದೊಂದು ಉತ್ತಮ ಬೆಳವಣಿಗೆ ಎಂದೇ ಬಣ್ಣಿಸಲಾಗುತ್ತಿದೆ.